Pages

Friday, January 30, 2009

ಪ್ರೇಮದ ಸುತ್ತೋಲೆ

ನನ್ನ ನಲ್ಮೆಯ ಮಲ್ಲಿಗೆಯೇ
ನಗುವೊಮ್ಮೆ ನೀ ಮನದುಂಬಿ !

ನನ್ನ ಜೀವ ಕಣ್ಮಣಿಯೇ
ಅರಳೊಮ್ಮೆ ಬಾನಗಲವಾಗಿ !

ಕಡಲಂಚ ಮಿಂಚೆಲ್ಲವನು
ತುರುಬಲ್ಲಿ ಸುರಿವಾಸೆ !

ನಿನ್ನ ನಗುವಲ್ಲಿ ಬೆರೆತು
ಜಗವೆಲ್ಲ ಮರೆತಂತೆ ಕನಸು !

ಏಳು ಬೆಟ್ಟಗಳ ಮೇಲೆ
ಮಿನುಗುತಿರುವ ಚುಕ್ಕಿಗಳು !

ಅಲ್ಲೇ ಕಣಿವೆಯ ನಡುವೆ
ಹಾರುತಿರುವ ಪ್ರೇಮದ ಪಕ್ಷಿ !

ಅನುದಿನದ ಹೃದಯ
ಬಡಿತವ ಲೆಕ್ಕ ಇಟ್ಟವರಾರು?

ಮನ ಮನೆಯಲ್ಲಿ
ಗೆಜ್ಜೆಯ ಕಾರುಬಾರು !

ಪೋಣಿಸಿದೆ ಇಲ್ಲ ಸಲ್ಲದ
ಕನಸಿನ ಮಾಲೆ !

ಅದರ ಮೇಲೊಂದು
ಪ್ರೇಮದ ಸುತ್ತೋಲೆ !

ಹೃದಯ ಗೂಡಿನೊಳಗೊಂದು
ಶೀತಲ ಸಮರ !

ಅವಳ ನೆನಪಿನ ನಡುವೆ
ಭ್ರಮರವಾಯಿತು ವಿರಹ !

No comments:

Post a Comment