Pages

Friday, January 30, 2009

ನಿರಾಸಕ್ತಿ

ದಿನದಂತೆ ಬಂದಿಹೆನು
ನಾ ಕಛೇರಿಗೆಂದು
ಹುರುಪಿಲ್ಲ ತುರುಸಿಲ್ಲ
ತಿರುವು ಪ್ರತಿಯೊಂದು

ಮನಸಿಲ್ಲ ಮನನಿಲ್ಲ
ವೇದನೆಯು ಬೆಟ್ಟದಷ್ಟು
ದೊರೆತಿಲ್ಲ ಪರಿಹಾರ
ತಲೆಯ ಕೊರೆದರೆಷ್ಟೂ


ಕಣ್ತುಂಬ ಹನಿಗೂಡೆ
ಮಿಂಚಿತ್ತು ವಿಷಯವೊಂದು
ಬೆಳ್ಳಂಬೆಳಗೆ ನೀಡಿಲ್ಲ
ಅವಳೆನಗೆ ಮುತ್ತೊಂದು !

No comments:

Post a Comment