Pages

Friday, January 30, 2009

ಆಶಂಸೆ

ಮಾತು ಮುತ್ತಾಗಲಿ ಮುತ್ತೆ ಮಾತಾಗಲಿ
ಹೊತ್ತು ಚಿತ್ತಾಗಲಿ ಚಿತ್ತ ಮತ್ತಾಗಲಿ
ವಿರಹ ವೀಣೆಯು ಅನುದಿನವು ಮಿಡಿದಿರಲು
ನಾದ ಬ್ರಹ್ಮವಾಗಲಿ ಬ್ರಹ್ಮ ತಾನಾಗಲಿ

ತಾಳ ಮೇಳಗಳಾಚೆ ಮಿಡಿವ ಮನವೊಂದಿರಲು
ತುಡಿವ ಕನಸುಗಳ ಮಡಿಲಲ್ಲಿ
ಕದಡಿದ ನೆನಪುಗಳ ಮಲ್ಲಿಗೆ ಮಾಲೆ
ಏನಾದರೇನಂತೆ ಮಾತಾಡಲೇನಂತೆ
ಸುಮದ ಕಂಪಿನಲಿ ಕಳುಹಿಸಿಯೇನು ಒಲವಿನೋಲೆ

ಒಲವು ಕಟ್ಟೀತೆ ಮನವ ತಟ್ಟೀತೆ ಮನಸ ಬಿಚ್ಚೀತೇ
ಹಗಲೇ ಗ್ರಹಣವಾಗಲಿ ಬಿಡಲಿ
ನಂದಾದೀಪ ಎಂದೆಂದೂ ಉರಿದೀತೆ
ಬ್ರಹ್ಮ ಬೆಳಕಾಗಿರಲು ಬೆಳಕು ನೀನಾಗಿರಲು
ಬೆಳಗುವುದು ಮನ ಮನೆಯು ಎಂದೆಂದೂ

ಪ್ರೇಮ ಚಿಪ್ಪಾಗಿರಲಿ
ಚಿಪ್ಪಿನೊಳು ಮೌನ ಶರಧಿಯಿರಲಿ
ಪ್ರತಿ ಹನಿಯಲ್ಲೂ ನಿನ್ನ ಹೊಳೆವ ಕಂಗಳಿರಲಿ !

No comments:

Post a Comment