Pages

Friday, January 30, 2009

ವೀಣಾನಾದ

ನಿನ್ನ ವೀಣೆಯಲಿಂದು ಅದಾವ
ರಾಗವ ನುಡಿಸುತಿಹೆ
ಕೇಳಲ್ಲಿ ಕೋಗಿಲೆಯು ಹೊಸ
ಪಲ್ಲವಿಯ ಹೆಣೆಯುತಲಿದೆ !

ದೂರ ಬಾನಲ್ಲಿ ಹೊಂಚಿ
ಕಾದಿಹುದು ಮಿಂಚು
ಯಾರನೋ ಸೆಳೆದಪ್ಪಲು
ನಡೆಸುತಿದೆ ಹೊಸತೊಂದು ಸಂಚು !

ಭೂಮ್ಯಾಕಾಶಗಳ ಕಣ್ಣೋಟದ ನಡುವೆ
ನೀ ಹಾಡು ನಿನ್ನಯ ಹಾಡು
ಬೀಸಿ ಧರೆಗಪ್ಪಳಿಸಿದ ನಾಲ್ಕು ಪ್ರೀತಿಯ ಹನಿ
ನವಿಲಂತೆ ಗರಿಗೆದರಿದೆ ಬದುಕ ಹೊಸ ಆಕರ್ಷಣೆ !

ಹೃದಯಗಳೆಷ್ಟೋ ಅರಳಿದವು ಮುರುಟಿದವೋ
ನನಿಗಿಷ್ಟ ನಿನ್ನಯ ಹಾಡು !
ಹಸಿರೆಷ್ಟು ಚಿಗುರಿದವೋ, ಹೂವೆಷ್ಟು ಅರಳಿದವೋ
ನನಗಿಷ್ಟ ಗುಡುಗು ಸಿಡಿಲು !

No comments:

Post a Comment