Pages

Friday, January 30, 2009

ಲಾಲ್ಭಾಗ್ ಬಾಲೆ

ಕನಕಾಂಬರವನಿತ್ತೆನಗೆ
ನೀನಂಬರದಲೆಲ್ಲಿರುವೆ
ಬಾಲೆ ನೀ ಬಾರೆ
ಎನ್ನೆದೆಗೆ ಮರಳಿ

ಒಂದೆರಡು ಗಳಿಗೆಯಲಿ
ಹೂದೋಟ ಬರಿದಾಯ್ತು
ಮನವನ್ನೇ ಕದ್ದೊಯ್ದೆ
ಹೂ ನೀನೆ ತಾನಾದೆ

ತಡಕುತ್ತ ಎಡಕುತ್ತ
ತೋಟವನು ಸರಿದಾಯ್ತು
ಮೈಬಣ್ಣ ಕೆಂಪಾಯ್ತು
ಮನವೆಲ್ಲ ರಂಗಾಯ್ತು

ಕಂಗಳಲಿ ಹೊಸ ಹುರುಪು
ತಿಂಗಳಿನ ಬೆಳಕಂತೆ
ಮಂಗಳ ಹಾಡಿಹುದು
ತಂಗಾಳಿ ಸುಳಿದಂತೆ

ನೀ ಕೊಟ್ಟ ಹೂವಿಂದು
ನುಉರಾಗಿ ಅರಳಿ
ಸೊಗಸಾಗಿ ಘಮ ಘಮಿಸಿ
ಎದೆಯೊಳಗೆ ನರಳಿ

ಕಂಪೆಲ್ಲ ನೆನಪಂತೆ
ಸುಡುತಿಹುದು ಕೆರಳಿ
ಬಾಲೆ ನೀ ಬಾರೆ
ಎನ್ನೆದೆಗೆ ಮರಳಿ

No comments:

Post a Comment