Pages

Friday, January 30, 2009

ಎನ್ನೊಲವ ಪದವಾಗು

ಕನಸ ಹೊದಿಕೆ ನಾ ಹೊದೆದು ಮಲಗಿಹೆನು
ನಿನ್ನ ನೆನಪ ಮಂದಿರದಿ
ನನಸ ತಂಬೆಲರು ಬೀಸುವುದು ಇನ್ನೆಂದು
ಶಿಶಿರ ಬರುತಿಹುದು ಗೆಳತಿ

ಹದಿ ಹರಯ ಬಯಸುವುದು ಒಲವಿರಲಿ ನಿನ್ಮನದಿ
ಇಷ್ಟಕ್ಕೆ ನೀ ಹರಿಣಿಯಾದೆ?
ಬದುಕ ಲತೆಯಲ್ಲಿ ನೀ ಸುಮವಾಗಿ ಅರಳು
ಎನ್ನೊಲವ ಪಂಕ್ತಿಯಲಿ ಪದವಾಗು !

No comments:

Post a Comment