Pages

Friday, January 30, 2009

ತರಳೆ ನೀನೆದುರಿಗಿರಲು

ತರಳೆ ನೀನೆದುರಿಗಿರಲು ನನಗಿಲ್ಲ ರಗಳೆ
ಕುಂತಿರುವೆ ಹೀಗೆಯೇ ಹಲವು ಜನುಮಗಳೇ

ದೂರವಾಣಿಯ ಹಿಡಿಯ ಕೆನ್ನೆಯಿಂದಲೆ ಹಿಡಿದಿರು
ಅದರ ರಿನ್ಗಣವೇ ನನ್ನೆದೆಯ ಚಿಗುರು

ಚಟಪಟನೆ ಉದುರುವುದು ಮಲ್ಲಿಗೆಯು ನಿನ್ನಧರದಿಂ
ಅದರಿಂದ ಜಿನುಗುವ ಜೇನಾಗಲೆನ್ನ ತನುಮನಂ

ಜಗವ ಜಿಗಿದಾಯ್ತೆ ಚಿಗರೆ ನಿನಗೆ
ಬಾ ಸುಮ ತಲ್ಪವಿಹುದು ಎನ್ನ ಹೃದಯದೊಳಗೆ

ನಗು ನಗುತಲೆ ನೀನೆನ್ನ ಏಕೆ ಹೀಗೆ ಕೊಲುವೆ?
ಒಂದು ಮಣಿ ಮುತ್ತನೆಸೆದು ಬಿಡು, ನಾ ಜಗವ ಮರೆವೇ

ಮರಳುಗಾಡಿನ ಮಧ್ಯದ ಸೌಂದರ್ಯದಲೆ ನೀನು
ಅಲೆಯನಪ್ಪಿ ಮುದ್ದಿಸುವ ನನ್ನ ಬಯಕೆ ತಪ್ಪೇನು?

ನಿನ್ನೆ ನಾ ಕಂಡಿಲ್ಲ, ನಾಳೆಯ ನಾ ಬೇಡುವುದೇ ಇಲ್ಲ
ನಿನ್ನ ಪರಿವೆಯೊಳಗೆ ಕಾಲ ಚಕ್ರ ಸಾಪೇಕ್ಷವಾಗಿದೆಯಲ್ಲ !!

No comments:

Post a Comment