Pages

Tuesday, November 25, 2008

ಪ್ರತಿಬಿಂಬ

ಚೆಲುವೆಯರಿದ್ದಾರಿಲ್ಲಿ ಅನೇಕ
ಕಷ್ಟವೇನೆಂದರೆ
ಯಾರನ್ನು ನನ್ನವಳೆಂದು ತಿಳಿಯಲಿ !
ಹುಡುಕುತ್ತೇನೆ ನಾನು ಆ ಹೃದಯವನು
ನಾ ಮಾತ್ರ ಕಾಣುವೆನದರಲ್ಲಿ
ಇಲ್ಲಿಯೂ ಕಷ್ಟವೇ
ನನ್ನ ನಾ ಕಾಣುವೆ ಪ್ರತಿ ಹೃದಯದಲಿ !

------------------------------------------------------------------
cheluveyariddarilli aneka
kashtaveenendare
yaarannu nannavaLendu tiLiyali !
huDukutteene naanu aa hRdayavanu
naa maatra kaaNuvenadaralli
illiyuu kashtave
nanna naa kaaNuve prati hRdayadali !

Monday, November 24, 2008

ಇವಳ ನೋಡ ಹೋದ ಕಥೆ

ಇವಳ ನೋಡಲು ಹೋದ ಕಥೆ ಬಹಳ ಸೊಗಸಿಹುದು
ಹುಡುಗಿ ಹಳೆ ಹೊಸತುಗಳ ಸಂಗಮ ಇದು ದಲ್ಲಾಳಿ ಹೇಳಿಹುದು

ಗಾಡಿಯಿಂದಿಳಿದು ಮನೆ ಕಡೆ ನೋಡಿದೆ ಕಾಣುವಳೆ ಅವಳೆಲ್ಲಾದರೂ
ಬನ್ನಿ ಬನ್ನಿರೆಲ್ಲರು ಎಂದೆನುತ ಸ್ವಾಗತಿಸಿದರು (ಭಾವಿ) ಅತ್ತೆ ಮಾವನವರು !

ಪಯಣ ಸುಖವಾಯಿತೆ ಕೈ ಕಾಲು ತೊಳೆದುಕೊಳ್ಳಿರಿ ಏನು ಸಂಭ್ರಮೊಪಚಾರ
ನನಗೋ ಲಗುಬಗೆಯಲಿ ಮನೆಯೊಳ ಸೇರುವಾಸೆ ತಂಗಿ ಚಿವುಟಿದಳು ಏನಣ್ಣ ಆತುರ?

ಈ ಹುಡುಗಿ ಎಂತಿಹಳೋ, ಭಗವಂತ ಕಾಪಾಡು, ಏಕಿನ್ನು ಬರಲಿಲ್ಲ ಪಾನೀಯ?
ಹುಡುಗಿ ಬಂದಳು, ಹೊಳೆವ ಕಂಗಳು, ಪೂರ್ಣ ತಿಂಗಳು, ನಾನೋಡಿ ಸ್ತಬ್ಧ ಅಪ್ಸರೆಯ !

ತೆಗೆದುಕೊಳ್ಳಿರಿ ಪೇಯ, ತಣಿಯಿತೆ ದಾಹ, ಉಪಚಾರ ಸಾಗಿತ್ತು ಮನೆ ಮಂದಿಗೆಲ್ಲ
ತಣಿವುದೆಂತೀ ದೃಶ್ಟಿದಾಹ, ಹೋದಳೆ ಒಳಗೆ, ಕಿಟಕಿಯಲಿ ಇಣುಕಿದಳಲ್ಲ ??

ಸ್ವಲ್ಪ ಕಳೆದು ಕೊಟ್ಟರವಕಾಶ ಮಾತಾಡಿಕೊಳ್ಳಿರಿ ಕೂಸು ಮಾಣಿಯರು !
ಮುಗುಳ್ನಕ್ಕು ನಸು ನಾಚಿ ಹೇಳಿದುದು ಎರಡೇ ಮಾತು "ಈ ಮನೆ ಎನಗಿನ್ನು ತವರು" !!

ಇನ್ನು ಹೇಳಲು ಏನಿದೆ ಎನಗೆ ಎಲ್ಲವು ದೈವೇಚ್ಚೆಯಂತೆ ನಡೆದುದು !
ಮಗದೆರಡು ತಿಂಗಳ ವಿರಹ ಕಳೆದ ನಂತರವೇ ಕೋಮಲಾಂಗಿ ನನ್ನ ಮಡದಿ ಆದುದು !!

------------------------------------------------------------------------------------------------------------------------------------
ivaLa nOdalu hOda kathe bahaLa sogasihudu
huDugi haLe hosatugaLa sAnngama idu dallaLi heeLihudu

gaaDiyindiLidu mane kaDe noDide kaaNuvaLe avaLellaadaru
banni bannirellaru endenuta swaagatisidaru (bhaavi) atte maavanavaru !

payaNa sukhavaayite kai kaalu toledukoLLiri enu sAnbhramoopachaara
nanagoo lagubageyali maneyoLa seruvaase tangi chivutidaLu enaNNa aatura?

ee huDugi entihaLo, bhagavanta kaapaaDu, ekinnu baralilla paaniiya?
huDugi baAndaLu, hoLeva kAngalu, poorna tingaLu, naanoDi stabdha apsareya !

tegedukoLLiri peya, taNiyite daaha, upachaara saagittu mane maAnndigella
taNivudeAntii dRshTi daaha, hodaLe oLage, kitakiyali iNukidaLalla ??

swalpa kaLedu koTTaravakaasha maataDikoLLiri kusu maaniyaru !
muguLnakku nasu naachi heLidudu eraDe maatu "ii mane enaginnu tavaru" !!

innu heLalu enide enage ellavu daiveccheyante naDedudu !
magaderaDu tingaLa viraha kaLeda nantarave koomalaAngi nanna maDadi aadudu !!

ನಮ್ಮೊಲವ ಬೆಸುಗೆಗೆ, ಭಗವಾನ್ ನೀನೆ ಸಾಕ್ಷಿ

ಅವಗೆಮ್ಪಿನ ಬೈಗಿನರಮನೆಯೋಳು
ಮುಂಗುರುಳು ಹಾರುತಿದೆ ಸಸ್ಯ ಶಾಮಲೆಯ
ನಿತ್ಯ ಸುಂದರ ನಿನ್ನ ನಯನ ಮಂದಿರ
ಗರ್ಭ ಗುಡಿಯೋಳದಗಿದೆ ಎನ್ನ ಹ್ರದಯ

ಜೀನ ಹನಿ ತನಿ ಗಂಧ ಚಂದನ
ಪ್ರಣಯ ವೇದನೆ ನಿನ್ನ ನಿದುಸುಯ್ಳು
ಕನ್ನಕಪ್ಪಿನೆದೆ ಹರಿವ ಹಸಿ ಬಿಸಿ ವೇದನೆ
ಎನ್ನೆದೆಯೋಲಿಲಿದವೂ ಜುಳು ಜುಳು

ನಿನ್ನ ಭಾವ ಸಾಗರವೆನಿತು ಹಿರಿದೂ
ನಿನ್ನ ವಿರಹವೆನ್ನ ಮಾನವ ಕಪ್ಪಿಟ್ಟಿತು
ನಿನ್ನ ನಗೆ ಜ್ಯೋತ್ಸ್ನದಲೇ ಪವಡಿಸೆ ನಾನು
ನಿನ್ನೆದೆಯ ಮಲ್ಲಿಗೆ ಕನವರಿಸಿತು

ಈ ಮಿಥ್ಯ ಜಗ ಪರರಿಗಿರಿಲಿ, ಶಶಿ ರವಿ ಮಲಗಿರಲಿ
ನಮ್ಮೊಲವ ಬೆಸುಗೆಗೆ, ಭಗವಾನ್ ನೀನೆ ಸಾಕ್ಷಿ
ರಜನಿಯುರುಳಲಿ, ಉಷೆಯು ಅರಳಲಿ
ನೀನಚ್ಚ ಕುವರಿಯೇ, ಲಜ್ಜೆ ಬಿಡದು ಕಾಮಾಕ್ಷಿ

--------------------------------------------------------------------------
avagempina baiginaramaneyoLu
munguruLu haarutide sasya shaamaleya
nitya sundara ninna nayana mandira
garbha guDiyoLaDagide enna hRdaya

jeena hani tani gandha chandana
praNaya veedane ninna niDusuylu
kaNNakappineDe hariva hasi bisi vedane
ennedeyoLiLidavoo juLu juLu

ninna bhaava saagaravenitu hiridoo
ninna virahavenna manava kappiTTitu
ninna nage jyotsnadale pavadise naanu
ninnedeya mallige kanavarisitu

ii mithya jaga pararigirili, shashi ravi malagirali
nammolava besugege, bhagavan neene saakshi
rajaniyuruLali, usheyu araLali
neenaccha kuvariye, lajje biDadu kaamaakshi