ಮತ್ತೆ ಮರಳುತಿರುವೆ ಅದೇ
ಹಳೆಯ ಎಕಾಂತಕೆ
ಕಾತುರದ ಆ ನಿಮಿಷಗಳು ಚರಿತೆಯಾದವು !!
ನೀ ಒಲ್ಲೆ ಎಂದರೂ ನಾ ಬಲ್ಲೆ
ನೀ ನಾಚಲಿಲ್ಲವೇ ?
ಪಿಡಿದ ಕೈಯ ಸುತ್ತಿ ಬಳಸ ಬೇಕೆನಿಸಲಿಲ್ಲವೇ ?
ಹೆಜ್ಜೆ ಸದ್ದು ಕೇಳದಂತೆ ನೀ
ನಡೆದೆ ಮೆಲ್ಲಗೆ
ಒಂದಿನಿತು ತಿರುಗಿ ನೋಡದೆ ಹೇಗೆ ತೆರಳಿದೆ ?
ಕಾಯುತಿರುವೆನು ಹೃದಯ
ಕದಡಿದ ಆ ಸ್ಪರ್ಶಕೆ
ಜಗವ ಮರೆಯಿಸುವ ನಾನೇ ನಿನ್ನವನೆಂಬ ಭಾವಕೆ !!
No comments:
Post a Comment