Pages

Monday, November 24, 2008

ಭಾವ ಭ್ರಮಾ ಜೀವಿ

ನಾನು ನಿನಗಾಗಿ
ಭಾವ ಭ್ರಮಾ ಜೀವಿಯಾಗ ಬಯಸುವುದಿಲ್ಲ ಮತ್ತೊಮ್ಮೆ

ಆದರೆ ಏನು ಮಾಡೋಣ?
ವಾಸ್ತವಿಕತೆಯ ಕಠೋರ ವಿವಶತೆಗೆ
ಕೆಲವೊಮ್ಮೆ ಸಿಕ್ಕು ಮುಳುಗುವಾಗ
ನಿನ್ನ ತೊಳ್ತೆಕ್ಕೆಗಿಂತ
ಭಾವನೆಗಳ ಮೃದು ಅಪ್ಪುಗೆ
ಹಿತವೆನಿಸುತ್ತದೆ !!

ಕನಿಷ್ಠ ಕನಸುಗಳಿಗಾದರೂ
ತಡೆಹಾಕದಿರು
ಹೃದಯ ಒಪ್ಪದಿದ್ದರೂ
ಮನಸು ತುಂಬ ಹರಿದು ಬರುತ್ತಿರುವುದು
ಸದ್ಯಕ್ಕೆ ಅದೊಂದೀ !

ಪ್ರಾಪಂಚಿಕತೆಯ ಎಲ್ಲೆಗೆಲ್ಲವನೂ ಮೀರಿ
ಕನಸಿನ ತೊಟ್ಟಿಲು
ಉಯ್ಯಾಲೆಯಾಡುತ್ತಿರುವುದ ನೋಡುವುದು
ನನಗೆ ಬಲು ಹಿತವೆನಿಸುತ್ತದೆ
ಬಿರಿಯದ ಹೂವಿನ ಜೀಕಾಟ
ಬಣ್ಣ ಎರಚುತ್ತದೆ

ಮೊದಲೊಮ್ಮೆ ಭಾವ ಜೀವಿಯಾಗಿದ್ದಾಗ
ನನ್ನ ಹೃದಯದ ಪ್ರೇಮ ಕಣಿವೆಗಳಲ್ಲಿ
ನಿನ್ನ ಸಕಲ ಸುಮಗಳ ರಥದಲ್ಲಿ ಕುಳ್ಳಿರಿಸಿ ಜೀಕಿದ್ದೆ
ಮನದ ಭಾವನೆಗಳ ಮುತ್ತುಗಳ ಬೊಗಸೆ ತುಂಬ
ನಿನಗೆ ಕೊಟ್ಟಿದ್ದೆ

ಈಗ ಮತ್ತೊಮ್ಮೆ ಅದೇ ನೆನಪುಗಳ ಮೀಟಿ
ವಿರಹದ ವಿಕಾರ ಗೀತೆ
ಬೇಡ ಬೇಡವೆಂದರೂ ಹರಡಿದೆ
ಪಂಚೇಂದ್ರಿಯಗಳನು ತಟಸ್ಥೀಕರಿಸುವುದು ಒಳಿತು
ಈಗಿಂದ ನಾ
ಭ್ರಮಾ ಜೀವಿಯಾಗುತ್ತಿದ್ದೇನೆಯೇ ಎಂಬ ಶಂಕೆಯಿದೆ !

ಮನುಜರೆಲ್ಲರು ಭ್ರಮಾ ಜೀವಿಗಳೋ
ಪ್ರೇಮಿಗಳು ಭ್ರಮಾಜೀವಿಗಳೊ
ಒಂದು ಅರಿಯದೇ ತೊಯ್ದಾಡುವ ಜೀವಿ
ಭಾವನೆಗಳಲಿ ತೀಲಿ ಹೋಗುವ ಹೆದರಿಕೆ

ಆದರೂ.............
ಮತ್ತೆ ನಾ ಭಾವ ಜೀವಿಯಾಗ ಬಯಸುವುದಿಲ್ಲ !!

---------------------------------------------------------------------------------
naanu ninagaagi
bhaava bhrama jeeviyaaga bayasuvudilla mattomme
aadare enu maadooNa?
vaastavikateya kaThora vivashatege
kelavomme sikku muLuguvaaga
ninna toLtekkeginta
bhaavanegala mRdu appuge
hitavenisuttade

kanishta kanasugaLigaadaru
taDehaakadiru
hRdaya oppadiddaru
manasu tumba haridu baruttiruvudu
sadyakke adondee !
praapanchikateya ellegaLellavanuu miiri
kanasina toTTilu
uyyaaleyaaDuttiruvuda nooDuvudu
nanage balu hitavenisuttade
biriyada huuvina jiikaaTa
baNNa erachuttade

modalomme bhava jiiviyaagiddaga
nanna hRdayada premakaNivegaLalli
ninna sakala sumagaLa rathadalli kuLLirisi jeekidde
manada bhaavanegaLa muttugaLa bogase tumba
ninage koTTidde

iiga mattomme adee nenapugaLa miiti
virahada vikaara giite
beeda bedavendaru haraDide
paAnchendriyagaLanu taTasthiikarisuvudu oLitu
iiginda naa
bhramaa jiiviyaaguttiddeneyee emba shankeyide !

manujarellaru bhramaa jiivigaLo
preemigaLu bhramaajiivigaLo
ondu ariyade toydaaDuva jiivi
bhaavanegaLali teeli hoguva hedarike
aadaruu.............
matte naa bhaava jiiviyaaga bayasuvudilla !!

No comments:

Post a Comment