Pages

Thursday, October 16, 2008

ಯುವಕರೇ ಜಾಗ್ರತೆ !!

ಯುವಕರೇ ಜಾಗ್ರತೆ
ನಿಮ್ಮ ಹೃದಯವನು ಎಚ್ಚರಿಕೆಯಿಂದ ರಕ್ಷಿಸಿಡಿ
ಅತ್ತಿತ್ತ ಹಾಯಿಸದಿರಿ ಕಣ್ಣು
ಕಮಲದಳಗಳಂತಿರುವ ನೇತ್ರಗಳೊಳಗೆ ಬಿದ್ದು ಬಿಟ್ಟೀರಿ ನೀವು !

ನಕ್ಕರೂ ನಗದಿರಿ ನೀವು
ಮುಗ್ಧ ಮುಗುದೆಯೆರ ಮುಗುಳ್ನಗೆಯಲಿ
ಅವರ ಗಲ್ಲದ ಗುಳಿಗಳಲಿ
ನೀವು ಹುಗಿಯಲ್ಪಡುವಿರಿ !

ಕೋಗಿಲೆಯಂತೆ ಮಧುರ ಧ್ವನಿ ಮಿದಿದರೂ
ಆಲಿಸದಿರಿ ನೀವು
ಪ್ರಪಂಚವನ್ನೇ ಮರೆತು
ಸ್ವಪ್ನಲೋಕದಲಿ ಕಳೆದು
ಹೋಗುವಿರಿ ಜೋಕೆ !

ಅವರ ನಡೆ(ನಡು) ಕಂಡು ನಳುಗದಿರಿ
ಅವರನುಪಮ ಸುನ್ದರ್ಯ ಸವಿದು ಮರುಳಾಗದಿರಿ

ಪಶ್ಚಾತ್ತಾಪ ಪಡಬೇಕಾದೀತು
ಹೃದಯವನು ಕಳೆದು
ಹುದುಕಬೇಕಾಗಬಹುದು ಅವರ
ಹ್ರ್ದಯದೊಳಗೆ ಇಣುಕಿ

ಬೇಡ ನಿಮಗೇ ಕಷ್ಟ
ನನ್ನದೊಂದು ಸಲಹೆ
ನಿಮ್ಮ ಹ್ರ್ದಯವನು ನೀವೇ
ಮೊದಲಾಗಿ ಕೊಟ್ಟು ಬಿಡಿ ಅವರಿಗಿ !!
~~~~~~~~~~~~~~~~~~~~~~~~~~~~~~~~
yuvakare jaagrathe
nimma hridayavanu echharikeyinda rakshisidi
attitta haayisadiri kannu
kamaladalagalanthiruva netragalolage biddu bitteri neevu !

nakkaru nagadiri neevu
mugdha mugudeyera mugulnageyali
avara gallada guligalali
neevu hugiyalpaduviri !

kogileyanthe madhura dwani mididaru
aalisadiri neevu
prapanchavanne marethu
swapnalokadali kaledu
hoguviri joke !

avara nade(nadu) kandu nalugadiri
avaranupama saundarya savidu marulaagadiri

paschattapa padabekaadeetu
hridayavannu kaledu
hudukabekaagabahudu avara
hridayadolaginuki

beda nimagee kashta
nannadondu salahe
nimma hridayavanu neeve
modalaagi kottu bidi avarigi !!

No comments:

Post a Comment