Pages

Sunday, October 19, 2008

ದೋಣಿ ಸಾಗಲಿ ಮುಂದೆ ಹೋಗಲಿ

ನೀ ಜೊತೆಯಲ್ಲಿದ್ದಾಗ
ತಿಳಿ ನೀರ ಕೊಳದಲ್ಲಿ ದೂನಿಯಲಿ
ತೇಲುವ ಕನಸು ಕಾನುವದಕು ಹೆದರಿಕೆ
ನನ್ನ ಜೀವದ ಚಿಂತಿಲ್ಲವೆನಗೆ
ಜೊತೆಗೆ ನೀನಿರುವೆ !

ಪಕ್ಕದಲಿಹ ಪ್ರಕೃತಿ ಸುನ್ದರ್ಯಕಿಂತಲೂ
ಮಿಗಿಲು ನಿನ್ನ ಚುಂಬಕ ಸೆಳೆತ
ಹುಟ್ಟು ಹಾಕದಿದ್ದರೂ ದೋಣಿ ಚಲಿಸುವುದು
ಅದೇ ಸೆಳೆತದ ಫಲವಿರಬೇಕು !

ಕೊಳದಿ ಇಹ ತಿಳಿ ನೀರ ನಾ ಚಿಮ್ಮಿಸಲಾರೆ
ಇಚ್ಛಿಸಿದರು ಮನ ನೀರ ಮುತ್ತಲೋಲ್ಲದು
ಹ್ರಿದಯವೆಕೂ ಕಂಪಿಸುವುದು
ಎಲ್ಲಿ ನಿನ್ನ ಪ್ರತಿ ಬಿಂಬ ಒದೆಯುವುದೂ !

ಒಂದು ಸೋಲಲಿಲ್ಲ ತುಟಿಯಲ್ಲಿ, ಮೊಗ್ಗಂತಯೇ ಇದೆ !
ಬಿಸಿಲಲ್ಲೂ ಸಲ್ಲಾಪ ನಡೆಸುವುದು
ನಿನ್ನ ಕಣ್ಣು, ಮುಂಗುರುಳು
ಮತ್ತು ರವಿಕಿರಣ ಮಾತ್ರ!
ಹುಣ್ಣಿಮೆಯ ರಾತ್ರಿಯಲಂತೂ
ಕೊಳ ತುಂಬ ನಿನ್ನದೇ ತಿಲಿನಗೆ !

ಅಂದೊಮ್ಮೆ ದೋಣಿ ಏರುವಾಗ
ಬೆದರಿ ಹರಿಣಿಯಂತೆ ಚೀರಿದ್ದೆ !
ನಾನಾಗ ತುಂಟನಂತೆ ನಕ್ಕಿದ್ದೆ !
ನಿನ್ನ ಹುಸಿ ಕೂಪಕೆ ಸಿಲುಕಿದ ನಾ
ಆಗಲೇ ಕವಿತೆಯಾಗಿ ಹರಿದಿದ್ದೇ !!

ಚಾಲನೆ ನೀಡಿದೆ ಸವಿ ನೆನಪು
ನನಸಿನ ದೋಣಿಯ ಪಯಣಕೆ
ಕೈಗೆ ಕೈ ಜೋಡಿಸಿ, ಜೊತೆ ಸೇರಿ !!!

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

nii joteyalliddaga
tiLi niira koLadalli dooNiyali
teluva kanasu kaaNuvadaku hedarike
nanna jeevada chintillavenage
jotege niiniruve !

pakkadaliha prakruti saundaryakintalu
migilu ninna chumbaka seLeta
huTTu haakadiddaru doNi chalisuvudu
ade seLetada phalavirabeku !

koLadi iha tiLi niira naa chimmisalaare
icchisidaru mana niira muTTalolladu
hridayavekoo kampisuvudu
elli ninna prati bimba oDeyuvudoo !

ondu sollilla tuTiyalli, moggantaye ide !
ii bisilallu sallaapa nadesuvudu
ninna kaNNu, munguruLu
mattu ravikiraNa maatra!
huNNimeya raatriyalantu
koLa tumba ninnade tiLinage !

andomme dooni eruvaaga
bedari hariniyante cheeridde !
naanaaga tunTanante nakkidde !
ninna husi koopake silukida naa
aagale kaviteyaagi harididde !!

chaalane niiDide aa savi nenapu
nanasina dooNiya payaNake
kaige kai jodisi, jote seri !!!

2 comments: