Pages

Sunday, November 22, 2009

heLibidu aa oNdu sollu

ಕಟ್ಟೆ ಒಡೆದು ಬರುವ ಪ್ರೀತಿಗೆ
ಒದ್ದನ್ಯಾಕೆ ಕಟ್ಟುವೆ ?
ಒಪ್ಪಿಕೊ ಎನ್ನ ನಿನ್ನೊಳಗಪ್ಪಿಕೋ
ಹ್ರಿದಯದೊಳಗಿರಿಸಿ ಏಕೆ ಇಲ್ಲವೆನುವೆ ?

ರಾತ್ರಿಯಲಿ ಪಲ್ಲಂಗ ಸುಡುತಿಹುದು
ಬೆಂಕಿ ಹೂವಿನ ಸವಿಯ ನಾ ಸವಿಯಲೆಂತು ?
ಬೀಳದ ಕನಸುಗಳ ಮನದಲ್ಲಿ ಹೆಣೆದು
ತಲೆದಿಂಬನು ತಬ್ಬುವ ಪರಿಯ ಹೇಳಲೆಂತು ?

ನಿನ್ನ ಮನದೊಳಗೆ ಅರಳಿ ನಿಂತಿದೆ
ಏಳು ಬಣ್ಣದ ಕಾಮನಬಿಲ್ಲು
ಕದ್ದು ಕೇಳಲು ಯಾರಿಲ್ಲ ಪಕ್ಕದಲಿ
ಹೇಳಿಬಿಡು ಕಣ್ಮುಚ್ಚಿ
ಪ್ರೀತಿಯ ಆ ಒಂದು ಸೊಲ್ಲು !!!

kaLLa naanu

ಕಳ್ಳ ನಾನೆನ್ನುವುದನು ನಾ ಇಲ್ಲವೆನ್ನುವುದಿಲ್ಲ  !
ರಾತ್ರಿಗಳಲಿ ನಿದ್ರಿಸದೆ ಚಟಪದಿಸುವುದು ಸುಳ್ಳಲ್ಲ !!
ನಿನ್ನದೊಂದು ಸಂದೇಶಕೆ ಕಾಯುವ ತಪವು ತಪ್ಪಿಲ್ಲ !!
ಹೇ ಮುಗುದೆ , ಪ್ರೀತಿಸಲೇಕೆ ನಿನಗಿನ್ನು ತಿಳಿದಿಲ್ಲ !!
(ತಿಳಿಸುವವರಿದ್ದರೆ ನೀ ಕಲಿಯುವುದಿಲ್ಲವೆಂದು ಹೇಳಿಲ್ಲವಲ್ಲ !!!! )

Friday, November 6, 2009

matte ekaantha

ಮತ್ತೆ  ಮರಳುತಿರುವೆ ಅದೇ 
ಹಳೆಯ  ಎಕಾಂತಕೆ  
ಕಾತುರದ ಆ ನಿಮಿಷಗಳು ಚರಿತೆಯಾದವು !!

ನೀ ಒಲ್ಲೆ ಎಂದರೂ ನಾ  ಬಲ್ಲೆ
ನೀ ನಾಚಲಿಲ್ಲವೇ ?
ಪಿಡಿದ  ಕೈಯ ಸುತ್ತಿ ಬಳಸ ಬೇಕೆನಿಸಲಿಲ್ಲವೇ ?

ಹೆಜ್ಜೆ ಸದ್ದು ಕೇಳದಂತೆ ನೀ 
ನಡೆದೆ ಮೆಲ್ಲಗೆ
ಒಂದಿನಿತು ತಿರುಗಿ  ನೋಡದೆ ಹೇಗೆ ತೆರಳಿದೆ ?

ಕಾಯುತಿರುವೆನು ಹೃದಯ 
ಕದಡಿದ  ಆ ಸ್ಪರ್ಶಕೆ
ಜಗವ ಮರೆಯಿಸುವ ನಾನೇ ನಿನ್ನವನೆಂಬ ಭಾವಕೆ !!