Pages

Friday, January 30, 2009

ಕಾದಿಹೆನು ನಿನಗೆಂದು

ನಿನ್ನೊಲವು ಎನಗೆ ಬೇಕೆಂದು
ಎನ್ನೊಲವ ಕರಗಿಸಿಹೆನು
ಬಯಕೆ ಬೆಂಕಿಯಾದುದು ಅರಿಯದಾಯಿತು

ಮನಸಿನೊಳು ತುಂಬ ಪಾರಿಜಾತವ ಚೆಲ್ಲಿ
ನಾ ಕಾದಿದ್ದೆ ಬಂತು
ಕೊನೆಗೂ ನೀ ಬರಲೇ ಇಲ್ಲ

ಹಿತ್ತಿಲ ಸಂದಿಗಳಲ್ಲಿ ನೀ
ಸುಳಿದು ಸೆಳೆಯುವೆಯೇಕೆ
ನಿನ್ನ ನಗುವೆನಗೆ ಕಾವ್ಯ ಬಿಂಬ

ಪಕಳೆ ಮುದುಡುವ ಮುನ್ನ
ಘಮ ಘಮಿಸು ಎದೆಯೊಳಗೆ
ಜಗದ ಹೂಬನವೆಲ್ಲ ನಿನಗೆ ಮುಡಿಪಿಟ್ಟೇನು

ನಿನ್ನ ಮಡಿಲು ಮುಡಿಗಳಲಿ
ಹೂವ ನೆಡಲು ಬಿಡು ಎನಗೊಂದು
ಹಬ್ಬಿಕೊಳ್ಳಲಿ ಪ್ರೇಮ ಲತೆ ದಂಟಿನೊಳಗೆ

ಮುನಿಸ ಬೇಲಿಯ ಆಚೆಗೆಸೆದು
ಬಾ ಎನ್ನ ಮನೆಯೊಳಗೆ
ಕಾದಿಹೆನು ನಿನಗೆಂದೇ ಇದು ಕೊನೆಯ ಘಳಿಗೆ !

No comments:

Post a Comment