Pages

Friday, January 30, 2009

ಊಟ

ನಡು ಮಧ್ಯಾನ್ನದ ತೀವ್ರ ವಿರಹದುರಿಯಲ್ಲಿ ನಾನಿರಲು
ನೀನೂ ಬುತ್ತಿ ತೆರೆದುದು ಸರಿಯೇ?

ಬಳೆಯ ಝಣ ಝಣದ ನಡುವೆ
ಚಪ್ಪರಿಸಿದ್ದು ಸಿಹಿಯ ನೀನು
ನೋಡ ನೋಡುತಲೆ ಮನಕೆ
ಮುಪ್ಪಡರಿದ್ದು ಎನಗೆ !

ಎನ್ನ ಹಸಿವ ತಿಳಿದೂ
ತುತ್ತು ಕೊಡದಿರುವುದು ಸರಿಯೇ?
ಓರೆ ಕಣ್ಣಲ್ಲಿಯೇ ಹೊತ್ತು ಕಳೆದದ್ದು ತರವೇ?

ಕೈ ತೊಳೆದದ್ದು ನೀರಲ್ಲೇ ಆದರೂ
ನನಗದು ಕುಡಿವ ಲಾವಾರಸ
ಎದೆಯ ಕೊರೆದಿಳಿದ ಆಮ್ಲ ರಸ !

ನಿನಗಿಲ್ಲದಿರೆ ಮನಸು
ನನಗಿಲ್ಲ ಮುನಿಸು !
ಅವಗಿವಗೆ ಹಂಚಿ ಬಿಡುವೆನು
ನನ್ನೊಲವ ತಿನಿಸು !
ಬದುಕುವೆನು ಚಪ್ಪರಿಸುತ
ನಿನ್ನದೇ ಕನಸು


No comments:

Post a Comment