Pages

Monday, November 24, 2008

ವಿಪರ್ಯಾಸ

ಒಂದು ದಿನದ ಮನುಕುಲದ ಕಥೆಯಿದು
ಮನುಕುಲದ ಹೋರಾಟದ ವ್ಯಥೆಯ ಮುಖವಿದು
ಈ ಜಗದ ರೀತಿ ಇದೆಯೋ ಏನೋ?
ಒಂದೆಡೆ ಸಿಡಿದು ಪುಡಿಯಾಗುವ ಕಂಬನಿಗಳಾದರೆ
ಮಗದೊಂದೂರಿನಲಿ ಮೋಜು ಮಸ್ತಿ ಕೇಕಿ ಘರ್ಜನೆ

ಒಂದು ದಿನ ಬಸ್ಸಿಗಾಗಿ ಒಂದು ಕಡೆ ಕಾಯುತಲಿದ್ದೆ
ನನ್ನೂರಿನ ಹೆಸರು ತಗಲಿಸಿದ ಬಸ್ಸಿನ ನಿರುಕಿಸುತಲಿದ್ದೆ
ಜನವೋ ಜನವಲ್ಲಿ ನಿರೀಕ್ಷೆಯ ದಿಟ್ಟಿಯೊಂದಿಗೆ
ಎಲ್ಲವೂ ನಾಟಕ ಶಾಲೆಯ ಗೊಂಬೆಗಳಂತೆ ಹೊಯ್ದಾಡುತ್ತಿವೆ

ಅದೇಕೋ ನನ್ನ ದಿಟ್ಟಿ ಬಲು ದೂರ ಹಾಯಿತು
ಯಾವತ್ತು ಯೋಚಿಸದ ನೋಡದ ದೃಶ್ಯ ಕಣ್ಕಟ್ಟಿತ್ತು
ಕಣ್ಣಿಗೆ ನಿಲುಕದ ದೂರದಲೊಂದು ನಾಟಕ ನಡೆಯುತಲಿತ್ತು
ಸಣ್ಣ ಗುಂಪಿನೊಳಗೋಡಿದ ದಿಟ್ಟಿ ಮಿದುಳಿನೊಳಗೆ ಅಚ್ಚೋತ್ತಿತು

ಅಲ್ಲೊಂದು ಗುಂಪು ನೆರೆದಿತ್ತು, ಬಹುಷಃ ಭಿಕ್ಶಕರಿರಬೇಕು
ಅಲ್ಲ ಅಲೆಮಾರಿಗಳೋ.... ಅಂತೂ ತುತ್ತು ಕೂಳಿನ ಹೋರಾಟಗಾರರು
ಅಲ್ಲಲ್ಲಿ ಇಣುಕುವವರು, ಬಿದ್ದಲ್ಲಿ ಹೆಕ್ಕುವರು
ಅಂತಿರುವವರದೇನೋ ಪ್ರದರ್ಶನದ ಸಿದ್ಧತೆ ನಡೆದಿತ್ತು

ಹರಿದ ಬಟ್ಟೆಯ ಧರಿಸಿದಂತಹ ಬಾಲೆಯೋರ್ವಳು ಇದ್ದಳು
ಅವಳಿದ್ದೆಡೆಗೆ ಕೈಯ ತೋರಿಸಿ ನುಡಿಯುತಲಿದ್ದನು ಓರ್ವನು
ಬನ್ನಿರಣ್ಣ, ನೋಡಿರಣ್ಣ... ನಮ್ಮ ಈ ಚಮತ್ಕಾರವ
ಜಗವು ಅರಿಯದ, ನಿಮಗೆ ತಿಳಿಯದ ಬಾಲೆಯ ಸಾಮರ್ಥ್ಯವ

ರಕುತವಿಲ್ಲವೀ ಚಿಗುರು ಮೊಗದಲಿ, ಹೀರಿ ಕುಡಿದರೂ ನಾ ಕಾಣೆ
ಮೇಲೆ ನೋಡ್ದಳು, ಹಿರಿಯರ ನಿಟ್ಟಿಪಳು, ಅದೇನು ಕಾದಿದೆಯೋ ಈ ಕುವರಿಗೆ?
ಸುತ್ತ ನೆರೆದ ಜನರ ನೋಡುತ ಬಾಲಕಂಗಳು ಸಿಡಿದವು
ನಾಲ್ಕು ಕಾಸು ಬಿದ್ದರಲ್ಲಿಗೆ ಒಂದು ಹೊತ್ತಿನ ಸಂಕಟ ಕಳೆಯಿತು

ಮಲಗು ಎಂದನು, ಮಲಗಿ ಬಿಟ್ಟಳು, ದೂರದಾಗಸ ಖಾಲಿ ನೀಲಿ
ಹೊಟ್ಟೆ ಮೇಲೆ ಬಟ್ಟೆ ಇತ್ತರು, ಅದರ ಮೇಲೆ ಕಲ್ಲು ಚಪ್ಪಡಿ
ಅದರ ಮೇಲೆ ಇನ್ನೆರಡರಟ್ಟಿ, ಹೊಟ್ಟೆಗಿಲ್ಲ ಚೂರು ರೊಟ್ಟಿ
ನೋಡಿರಣ್ಣ ಇಲ್ಲಿಯೇ, ಒಡೆವೆ ಇದನೀಗ ಕುಟ್ಟಿ ಕುಟ್ಟಿ

ಎದ್ದ ಸುತ್ತಿಗೆ ಬಿದ್ದ ಪೆಟ್ಟಿಗೆ ಕಲ್ಲು ಚಪ್ಪಡಿ ಪುಡಿ ಪುಡಿ
ಏಟು ಬಿದ್ದುದು ಕಲ್ಲಿಗೂ, ಹೊಟ್ಟೆಗೂ....ಬದುಕಿಗೂ??
ಬಾಲ ಕಂಬನಿ ಸಿಡಿಯಿತೂ... ಕಣ್ಣ ಬಿಂಬ ಒಡೆಯಿತೋ...
ನೋಡಿರಣ್ಣ, ಕಾಣಿರಣ್ಣ ಸಣ್ಣ ಬಾಲೆಯ ಚಮತ್ಕಾರವ

ಹೆಣ್ಣಿನುದರಕೆ ಏನು ಶಕ್ತಿಯೂ ಬದುಕಿಗಾಗಿನ ಯುಕ್ತಿಯೂ
ಕೂಳಿಗಾಗಿನ ಈ ಪರಿಯ ಹೋರಾಟ ಪ್ರಕೃತಿಯ ಅನಿವಾರ್ಯ ರೀತಿ ನೀತಿಯೇ?
ಅಲ್ಲಿ ಒಂದೆಡೆ ಬಾಂಬು ಸಿಡಿವುದು, ಇಲ್ಲಾದರೋ ಬದುಕೇ ಮಡಿವುದು
ಮನುಕುಲದ ವಿಪರ್ಯಾಸವೂ, ಅಲ್ಲ ಬದುಕಿನ ಪರಿಹಾಸವೋ?

-----------------------------------------------------------------------------------------
ondu dinada manukulada katheyidu
manukulada hOraatada vyatheya mukhavidu
ii jagada riiti ideyoo enO?
ondeDe siDidu puDiyaaguva kambanigaLadare
magadondurinali mooju masti keeki gharjane

ondu dina bassigaagi ondu kade kaayutalidde
nannurina hesaru tagalisida bassina nirukisutalidde
janavoo janavalli niriiksheya diTTiyondige
ellavuu naataka shaaleya gombegaLaAnte hoydaaDuttive

adeekoo nanna diTTi balu duura haayitu
yaavattu yoochisada nooDada dRshya kankaTTittu
kaNNige nilukada duuradalondu naaTaka naDeyutalittu
saNNa gumpinoLagoDida diTTi miduLinoLage acchottitu

allondu gumpu neredittu, bahushaHa bhiksukarirabeku
alla alemaarigaLo.... antuu tuttu kuuLina hooraaTagaararu
allalli iNukuvavaru, biddalli hekkuvaru
aAntiruvavaradeenoo pradarshanada siddate naDedittu

harida baTTeya dharisidantaha baaleyorvaLu iddaLu
avaLiddeDege kaiya torisi nuDiyutaliddanu orvanu
banniraNNa, keLiraNNa... namma ii chamatkaarava
jagavu ariyada, nimage tiLiyada baaleya saamarthyava

rakutavillavii chiguru mogadali, hiiri kuDidaroo naa kaaNe
meele noDdaLu, hiriyara niTTipaLu, adeenu kaadideyo ii kuvarige?
sutta nereda janara nooduta baalakangaLu siDidavu
naalku kaasu biddarallige ondu hottina saAnkaTa kaLeyitu

malagu endanu, malagi biTTaLu, duuradaagasa khaali niili
hoTTe mele baTTE iTTaru, adara mele kallu chappaDi
adara mele inneraDaraTTi, hoTTegilla chuuru roTTi
nooDiraNNa illiye, oDeve idaniiga kuTTi kuTTi

edda sittige bidda peTTige kallu chappaDi puDi puDi
eTu biddudu kalligoo, hoTTegoo....badukigoo??
bala kambani siDiyitoo... kaNNa bimba oDeyito...
nooDiraNNa, kaaNiraNNa saNNa baaleya chamatkaarava

heNNinudarake enu shaktiyo badukigaagina yuktiyoo
kuuligaagina ii pariya hooraaTa prakRtiya anivaarya riiti niitiyee?
alli ondeDe baambu siDivudu, illadaro baduke maDivudu
manukulada viparyaasavoo, alla badukina parihaasavo?

No comments:

Post a Comment