Pages

Saturday, October 18, 2008

ಡಿಸೆಂಬರ್ ಚಳಿ

ಹೊಗೆಯಾಡುವ ಬಿಸಿ ಚಹಾ ಹೀರೋಣವೆಂದರೆ
ಡಿಸೆಂಬರಿನಲ್ಲಿ ಚಳಿಯೇ ಇಲ್ಲ !
ಹೇಂಗರಿನಲ್ಲಿ ಅನಾಥವಾಗಿ ತೂಗಾಡುತ್ತಿದೆ ಸ್ವೆಟರ್
ಹೊಸತಾಗಿ ಡಿಸೆಂಬರಿಗೆಂದೇ ಕೊಂಡದ್ದು !

ಅಂದು ಮಳೆರಾಯ ಬೇಕೆಂದಾಗ ಬರಲಿಲ್ಲ


ಬಂದವ ಇದ್ದದ್ದನ್ನು ಸಮುದ್ರ ರಾಜನಿಗೆ ಒಪ್ಪಿಸಿದ !
ದಿವಸವೂ ಬಿಸಿ ಚಹಾ ಕುಡಿಯಲಿಲ್ಲ !
ಸ್ವೆಟರ್ ಹೊಸತು ತೆಗೆದಿರಲಿಲ್ಲ !!

ರಾತ್ರಿ ಭಯಂಕರ ಸೆಕೆ
ಮುಂಜಾವು ಡಿಸೆಂಬರಿನ ಇಬ್ಬನಿಯಿಲ್ಲ
ಗದ್ದೆ ತೋಟದಲ್ಲಿ ಜೇಡನ ಬಲೆ ಕಾಲಿಗೆ ಎಡತಾಗುವುದಿಲ್ಲ !
ಬೆವರ ಹನಿ ತೊಟ್ಟ ಅಂಗಿಯ ತೋಯಿಸುತ್ತದೆ
(ತೊಟ್ಟದ್ದನ್ನು ಬಿಚ್ಚಿ ಎಸೆಯೋಣವೆನಿಸುತ್ತದೆ !!)

ಬಿಸಿ ಚಹಾಕ್ಕೆ ಇಂದು ರುಚಿಯಿಲ್ಲ !
ಸ್ವೆಟರಿನ ಅವಶ್ಯಕತೆಯಿಲ್ಲ !!

~~~~~~~~~~~~~~~~~~~~~~~~~~~~~~~~~~~~~~~~~~~~~~~~~~
hogeyaaDuva bisi chaha hiironavendare
ii decembarinalli chaliye illa !
hangerinalli anaathavaagi tugaduttide sweTar
hosataagi ii decebarigende konDaddu !

andu maLeraaya bekendaaga baralilla
bandava iddaddannu samudra raajanige oppisida !
aa divasavu bisi chaha kudiyalilla !
sweTar hosatu tegediralilla !!

raatri bhayankara seke
munjaavu decembarina ibbaniyilla
gadde toTadalli jedana bale kaalige edataaguvudilla !
bevara hani toTTa angiya tooyisuttade
(toTTaddannu bicchi eseyonavenisuttade !!)

bisi chahaakke indu ruchiyilla !
sweTarina avashyakateyilla !!

1 comment: