Pages

Wednesday, December 17, 2008

ತುತ್ತು

ನಿನ್ನೊಂದು
ಮುತ್ತೇ
ನನಗೀವುದು
ಸಾವಿರ ಹೊತ್ತಿನ
ಮತ್ತಿನ ತುತ್ತು !

ಸ್ಫೂರ್ತಿ

ಅರಳು ಹುರಿವ
ನಿನ್ನ
ಮಾತಿನಲ್ಲಿ
ನಾ
ಅರಳಿಬಿಟ್ಟೆ !

ಮರು ಜನ್ಮ

ನೀನು ನನ್ನನ್ನು ಜನ್ಮ ಜನ್ಮಾಂತರಗಳ ಬಂಧನಕ್ಕೆ
ಒಳಪಡಿಸಲು ಇಚ್ಚಿಸುವೆಯಾದರೆ
ಸ್ವಲ್ಪ ನಿಲ್ಲು.. ಹಳೆ ಕಡತಗಳ ಶೂಧಿಸಬೇಕು
ಅದರ ಆಧಾರದಲ್ಲಿ ಮುಂದಿನ ಜನ್ಮಗಳ ಲೆಕ್ಕ ಈಗಲೀ ಬರೆದಿಡುವೆ

ಚಂದಿರ

ನನ್ನ ಮನೆಯೊಳು
ಯಾವತ್ತು ಹೊಳೆವುದು
ಹುಣ್ಣಿಮೆ ಚಂದಿರ
ನನ್ನವಳ ಮೊಗ
ಬಲು ಸುಂದರ !

ಅನಂತ ಪ್ರೇಮದೆಡೆಗೆ

ನನ್ನ
ಮನಸ ಬಾಗಿಲ ತೆರೆದು ಬಿಟ್ಟೆ
ಹೃದಯದ ಪರದೆ ಸರಿಸಿ ಬಿಟ್ಟೆ
ಈಗ
ಕನಸ ಪಕ್ಷಿ ಸ್ವಚ್ಚಂದದಲಿ
ಹಾರಾಡುತ್ತಿದೆ ಅನಿಕೇತನವಾಗಿ !

ಸ್ಪಂದನ

ಎಲ್ಲವೂ ಆನಂದಮಯವಾಗಿರುವಾಗಲೇ
ನೀನು ನನ್ನ ಬದುಕಲ್ಲಿ ಪ್ರವೇಶಿಸಿದೆ
ಅತ್ಯಂತ ಕೋಮಲ ಮೃದು ಸ್ಪಂದನದಲ್ಲೂ
ನೋವಿನ ಸೆಳೆತವಿದೆಯೆಂದು ನೀನು ತೋರಿಸಿಕೊಟ್ಟೆ !

ಸಾವು ಬದುಕು

ಸಾವಿನಾಚೆ ಬದುಕಿದೆಯೋ ಇಲ್ಲವೋ ನಾನರಿಯೆ
ನಾ ಬದುಕಿರುವಾಗಲೀ ನೀನ್ಯಾಕೆ ಅದನು ತೋರಿಸಿಕೊಡುವೆ !

ಸಾನ್ಯಮಿ

ನಾ ಬಹು ಸಂಯಮಿ ಎಂಬುದು
ನನ್ನ ನಂಬಿಕೆ
ನೀ ಮುಗುಳ್ನಕ್ಕರೆ ನನ್ನ ನಂಬಿಕೆಗಳೆಲ್ಲ
ಅಲ್ಲಾಡಿಬಿಡುತ್ತವೆ !!

ಬಚ್ಚಿಟ್ಟ ಮುತ್ತು

ಹೃದಯವನು ಅಗೆದು ಬಗೆದು
ಕೊನೆಗೆ ದೊರಕಿದುದು ಒಂದು
ಥಳ ಥಳಿಸುವ ಸಿಹಿಯಾದ ಮುತ್ತು
ನಾ ಕೇಳದೆ
ನೀ ಹೇಳದೆ
ಕೊಟ್ಟದ್ದು !
ಬಚ್ಚಿಟ್ಟದ್ದು !!

ಮರುಜನ್ಮ

ಕ್ರೂರತನಕ್ಕೂ ಒಂದು ಮಿತಿಯಿದೆ
ನಿನಗಿನ್ನೂ ನನ್ನ ತಿವಿದು ತಿವಿದು
ತೃಪ್ತಿಯಾಗಲಿಲ್ಲವೇ?
ಚಿಂತಿಸದಿರು,
ನಿನಗಾಗಿಯೀ ನಾನು ಇನ್ನೊಮ್ಮೆ ಜನ್ಮವೆತ್ತಿ
ಬರುತ್ತೇನೆ !

Monday, December 8, 2008

ತಪ್ಪಲ್ಲವೀ??

ನೀನು ಕ್ಷಣ ಕಾಲ ತೊರೆದೆಯೆಂದು
ನಾನು ಅಳುವುದು ಸರಿಯಲ್ಲ
ಅದು ನಂಗೂ ಗೊತ್ತು
ಹಾಗೆಂದೇ ಆದರೂ
ಕ್ಷಣ ಕಾಲವಾದರೂ ನನ್ನ ತೊರೆಯುವುದು
ತಪ್ಪೆಂದು ನಿನಗನಿಸುವುದಿಲ್ಲವೇ??

ಸಿಡಿಲು

ಮಳೆಯೊಂದಿಗೆ ಆಗಸದಲಿ
ಮೇಘಗಳು ಗುಡು ಗುಡುವೆನ್ನುವಾಗ
ನಿನ್ನ ನೆನಪಾಗಿ ಬೆವರುವುದೇಕೆಂದು
ನಾನರಿಯೆ !!

ರಾಜಿ ಸಂಧಾನ

ವಾಸ್ತವ ಪರಿಸ್ಥಿತಿಗಳೊಡನೆ ರಾಜಿ ಮಾಡಿಕೊಳ್ಳಬೇಕು
ಎನ್ನುವುದು ಬುದ್ದಿವಂತರ ಅಂಬೋಣ
ಆದ್ದರಿಂದಲೇ.......
ನನ್ನ ಬಿಗಿಯಪ್ಪುಗೆಯಿಂದ ತಪ್ಪಿಸಿಕೊಳ್ಳುವ
ಪ್ರಯತ್ನ ಮಾಡಬೇಡ !

ನನ್ನಧರ ನಿನಗೆ ಕಹಿಯೇ

ಪ್ರತಿ ವಾರ ಐಸ ಕ್ರೀಮ್ ಪಾರ್ಲರಿನಲ್ಲೇ
ಐಸ್ ಕ್ರೀಮ್ ತಿನ್ನಬೇಕೆಂದೇಕೆ ನಿನಗೆ ಹಠ?
ನನ್ನಧರ ನಿನಗೆ ಕಹಿಯೇ?

ಮರೆತು ಹೋದ ನೋವು

ಬದುಕು ಅರಳೀತೆಂಬ ಆಶಾವಾದ ನನಗಿತ್ತು
ನಿರಾಷೆಯಾಗಲಿಲ್ಲ, ಅಂತೆಯೇ ಆಯಿತು !
ಇಷ್ಟೊಂದು ಘಮ್ಮಾಗಿ ಅರಳೀತೆಂದು
ಮಾತ್ರ ನಾ ಭಾವಿಸಿರಲಿಲ್ಲ !
ಮುದುಡುವ ನೋವಿನ ಸುಖ
ಹೇಗೆಂದು ಮರೆತು ಹೋಗಿದೆ !!

Wednesday, December 3, 2008

ತಂಬಿಸಿಲು

ಬಿಸಿಲಿನಲ್ಲಿ ಬೇಯುವುದು ಕಷ್ಟವೇ ಸರಿ
ನಿನ್ನ ಹೃದಯ ತಾಪದೆದುರು
ಬಿಸಿಲಿನ ಝಳವೂ ತಂಪೆನೆಸಿದರೆ
ಅದು ಬಿಸಿಲ ತಪ್ಪಲ್ಲ !

ಋತು

ಕಾಲವಾವುದಾದರೇನು?
ನವ ದಂಪತಿಗಳಿಗೆ?
ಸರ್ವ ಋತುಮಾನವೂ ಸರ್ವ ಶ್ರೇಷ್ಠ
ನೀ ಋತುಮತಿಯಾದಾಗ ಮಾತ್ರ ನನಗೆ ಬಲು ಕಷ್ಟ !

ಪಲ್ಲವಿ

ಅವಳು ಪಲ್ಲವಿಯಾದರೆ
ನಾನು ಅನುಪಲ್ಲವಿಯಾಗುವೆ !

ಪಲ್ಲವಿ

ಅವಳು ಪಲ್ಲವಿಯಾದರೆ
ನಾನು ಅನುಪಲ್ಲವಿಯಾಗುವೆ !

ಮುಗ್ಧತೆ

ಮಗುವಿನಂತೆ ಮುಗ್ಧ ಮನಸು ನನ್ನದು
ಎನ್ನುವುದಕೆ ನನ್ನ ಆಕ್ಶೇಪವಿದೆ
ಕೆಲವೊಮ್ಮೆ ಬಲು ಕ್ರೂರಿಯಾಗುತ್ತೇನೆ ಇದಕೆ
ನಿನ್ನ ರಕ್ತ ಚೆಲ್ಲಿದ ತುಟಿಯೇ ಸಾಕ್ಷಿ !

ಕಮಲನೇತ್ರ

ನಿನ್ನ ಕಂಗಳನು ನನ್ನ ಹೃದಯದೊಳಗೆ ಇರಿಸುವೆ
ತುಸುವಾದರೂ ಚಂದ್ರ ಕಾಂತಿ ಪಸರಿಸಲಿ !
ಇಲ್ಲವಾದರೆ ದುಂಬಿಗಳ ಝ್ಹೆಂಕಾರವನು
ನೀನು ಹೇಗೆ ಸಹಿಸುವೆ?

ಪ್ರಳಯ

ಪ್ರಳಯ ಬರುವುದಾದರೆ ಬರಲಿ ಮತ್ತೊಮ್ಮೆ
ನಾನದನು ಖಂಡಿತ ಸ್ವಾಗತಿಸುವೆ
ನೀನಂತೂ ಬಲು ಕಠಿಣವಾಗಿಯೇ ಇರುವೆ
ಹೃದಯದಗ್ನಿಯನು ಬಚ್ಚಿಡಲಿ ಎಲ್ಲಿ?

ಮಾರ್ದವತೆ

ಪ್ರಿಯೆ, ವಿರಹ ತಾಪದಿ ಅತ್ತು ಅತ್ತು
ಕಣ್ಣುಗಳ ಬೆಂಕಿಯಾಗಿಸಬೇಡ
ಆಗಸದ ನಕ್ಷತ್ರಗಳು ನಿನ್ನ ನಯನಗಳ
ಮಾರ್ದವತೆಯನು ಸುಃಖಿಸಲಿ ಬಿಡು !

ನಿನ್ನ ನಾ ಚೆನ್ನಾಗಿ ಬಲ್ಲೆ

ನಿನ್ನ ಕೆಲವು ನಗೆಗಳ ಅರ್ಥ ನನಗೊತ್ತು
ಮೌನದ ಭಾಷೆಯ ಆಳ ನಾ ಅರಿಯದೇ ಹೋದರೂ
ನಿನ್ನ ಅಧರಗಳ ನಾ ಚೆನ್ನಾಗಿ ಬಲ್ಲೆ !

ಅಸ್ವಸ್ಥತೆ

ನಿನ್ನ ಕಣ್ಣ ನೋಟದಿಂದ ಉಕ್ಕೇರಿ ಹರಿದಿದ್ದ ಲಾವಾರಸ
ನನ್ನ ಕಣ್ಣ ಮೂಲಕ ಸಾಗಿ ಹೃದಯವನ್ನು ತಂಪಾಗಿರಿಸಿದ್ದು
ಅಂದಿಗೆ ದಿಟವೇ ಆಗಿತ್ತು !
ಆದರೆ ಇದೂ ನಿಜವೇ
ಇಂದು ನಾನು ಅಸ್ವಸ್ಥನಾಗಿದ್ದೆನೆ !

ಅಹಿತ

ತಂತಿಯಿಂದ ಚಿಮ್ಮಿದ ನಾದ ಎಷ್ಟೇ ಮಧುರವಾಗಿರಲಿ
ಅದು ನಿನ್ನ ಹೃದಯವನ್ನು ಗೀರಿ
ನೋಯಿಸುವುದಾದರೆ
ನನಗದು ಅಹಿತವೇ!!!

Wednesday, November 26, 2008

ಎಚ್ಚರಿಕೆ

ನನ್ನ ಹೃದಯಕ್ಕೆ ಬೆಂಕಿಯಿಟ್ಟು
ನೀ ಸುಖವಾಗಿರಬಹುದೆಂದು ಎಣಿಸಬೇಡ
ನಾನು ಉರಿದು ನಾಶವಾಗುವೆ
ಹೊಗೆಯ ನುಂಗುತ್ತ
ಬದುಕಬೇಕಾಗಿರುವುದು ನೀನೆ!

ವ್ಯಥೆ

ಮೊದಲ ರಾತ್ರಿ
ಪಲ್ಲಂಗದಲಿ
ಹಿಚುಕಲ್ಪಡುವ
ಹೂವಿಗೆ
ದುಃಖಿಸುವವರು
ಯಾರು?

ಮತ್ತೆ ಅದೇ ಗತಿ

ಹೃದಯವೆನ್ನದೆಲ್ಲಿ
ಕಳೆದಿಹುದೆಂದು
ಅರಸಿದೆನೆಲ್ಲೆಲ್ಲು !
ಕಾಣಲಿಲ್ಲ ! ದೊರೆಯಲಿಲ್ಲ !
ಅದೂ...
ನಿನ್ನ ಸೆರಗಿನೊಂದಿಗೆ ಹಾರಿತೇ?

ಪರಾಭವ

ನಿನ್ನ ಪ್ರೇಮದ
ಓಟಿಗೆ ಸ್ಪರ್ಧಿಸಿದ
ನಾನು
ನನ್ನ ಹೃದಯ
ಠೇವಣಿಯನ್ನು
ಕಳೆದುಕೊಂಡೆ !

ಶಿಕ್ಷೆ

ಹುಡುಗೀ
ನಿನ್ನನ್ನು ಬಾಹುಗಳ
ಸಂಕೋಲೆಯಲ್ಲಿ
ಬಂಧಿಸುತ್ತಿದ್ದೇನೆ
ಹೃದಯ ಕದ್ದ
ಆರೋಪದಲ್ಲಿ !

ಪರಿಹಾರ

ನನ್ನ
ಹೃದಯಾಗ್ನಿಯ
ಆರಿಸಲು ದಾರಿಯೊಂದೆ
ಹಾಯಿಸು
ನಿನ್ನಗ್ನಿಶ್ಯಾಮಕದಳದ
ಪ್ರೇಮ ಸುಧೆ !

ನಿತ್ಯ ಕಾಯಕ

ನನ್ನೆದೆಯ
ಗರ್ಭ ಗುಡಿಯೊಳು
ನಿನ್ನ ಮೂರುತಿಯ
ಪ್ರತಿಷ್ಟ್ಹಾಪಿಸಿರುವೆ
ನಿತ್ಯ ಪೂಜೆಗೈಯುವೆ

ಕಾಠಿಣ್ಯ

ಹಿಮಾಲಯ ಅದೆಷ್ಟು
ಉನ್ನತ ಶಿಖರ !
ಆದರೂ
ಅದು ಕರಗುತ್ತದೆ
ನಿನ್ನ ಪುಟ್ಟ ಹೃದಯ
ಮಾತ್ರ ಯಾಕೆ
ಹೀಗೆ ಕಠಿಣ?

Tuesday, November 25, 2008

ನೀನೆ ಹೂವಾಗು

ಹೂ ಬನಕ್ಕೆ
ಏಕೆ ಬೇಕು
ಸಾವಿರ ಹೂಗಳು
ಓರ್ವಳು ಅನುಪಮ
ಸುಂದರಿ (ನೀನು ಹೂವಾಗಿ)
ನಿಂತರೆ ಸಾಲದೇ?

-------------------------------------
huu banakke
eke beeku
saavira huugaLu
oorvaLu anupama
sundari (niinu huuvaagi)
nintare saalade?

ಎಲ್ಲ ನಿನಗಾಗಿ

ನಾ ಮಂದಿರಕೆ
ಬರುವುದು
ದೇವನಿಗಾಗಿ ಅಲ್ಲ !
ಹೂ ತರುವ ನಿನಗಾಗಿ !

----------------------------------------
naa mandirake
baruvudu aa
deevanigaagi alla !
huu taruva ninagaagi !

ತಪ್ಪಿತಸ್ತೆ

ನನ್ನ ಹೃದಯದ ಎಲ್ಲ
ಬಾಗಿಲುಗಳನ್ನು ನಾನು ಮುಚ್ಚಿದ್ದೆ !
ಆಕೆ ಖಂಡಿತವಾಗಿ ತಪ್ಪು
ಮಾಡಿದಳು
ಎಲ್ಲ ಅಡೆ ತಡೆಯ ಒಡೆದು ಮುನ್ನುಗ್ಗಿದಳು

---------------------------------------------------------------
nanna hRdayada ella
baagilugaLannu naanu mucchidde !
aake khanditavaagi tappu
maaDidaLu
ella aDe taDeya oDedu munnuggidaLu

ಹ್ರದಯದ ನಾಟ್ಯ

ಕಣ್ದೆರೆದು ನೋಡಿ
ಹ್ರದಯದ ನಾಟ್ಯ
ಎಲ್ಲೆಲ್ಲು ಪಲ್ಲವಿಸಿದೆ
ಹುಡುಕಿ ನೋಡಿ
ಪ್ರೀತಿ ಅಲ್ಲೇ ಇದೆ !

-----------------------------------
kaNderedu nooDi
hRdayada naatya
ellellu pallaviside
huDuki nooDi
priiti alle ide !

ಅನುಭವ

ಸುಮದ ಸೌಂದರ್ಯ ಬೆಳಗುವುದು
ಸುವಾಸನೆಯಿಂದ
ಪ್ರೀತಿಯ ಆನಂದ ತಿಳಿಯುವುದು
ಅನುಭವದಿಂದ !

----------------------------------------------------
sumada soundarya beLaguvudu
suvaasaneyinda
priitiya aananda tiliyuvudu
anubhavadinda !

ಅಪವಾದ

ವಿಜ್ಞಾನಿಗಳ ಲೆಕ್ಕದಲ್ಲಿ ಹೃದಯ
ಬಡಿತ ನಿಮಿಷಕ್ಕೆ ೭೨ ಬಾರಿ !
ನಾನೊಬ್ಬ ಅಪವಾದ
ಅವಿತಿದ್ದಾಳೆ ಆಕೆ
ಆಗಲಿಲ್ಲವೇ ೧೪೪ ಸಾರಿ !!

--------------------------------------------------
vijnaanigaLa lekkadalli hRdaya
baDita nimishakke 72 baari !
naanobba apavaada
avitiddaLe aake
aagalillave 144 saari !!

ವೇದನೆ

ನನ್ನ ಹೃದಯದ
ವೀಣೆ ನುಡಿಸುವ
ಆಕೆಗೆ ತಿಳಿದಿಲ್ಲ
ವೀಣೆಯ ತಂತಿಯ
ವೇದನೆಯೆಷ್ಟೆಂದು ?

------------------------------------
nanna hRdayada
viine nuDisuva
aakege tiLidilla
viineya tantiya
veedaneyeshtendu ?

ಬಂಧ

ನೀ ಕೋಲ್ಮಿಂಚು
ನಾ ಕರಗುತ್ತೇನೆ
ನೀ ಸೆಳೆತ
ನಾ ಬಳಲುತ್ತೇನೆ
ನೀ ಪ್ರೀತಿ
ನಾ ಬಯಸುತ್ತೇನೆ !

-----------------------------------
nii kolmincu
naa karagutteene
nii seLeta
naa baLalutteene
nii priiti
naa bayasutteene !

ಪ್ರತಿಬಿಂಬ

ಚೆಲುವೆಯರಿದ್ದಾರಿಲ್ಲಿ ಅನೇಕ
ಕಷ್ಟವೇನೆಂದರೆ
ಯಾರನ್ನು ನನ್ನವಳೆಂದು ತಿಳಿಯಲಿ !
ಹುಡುಕುತ್ತೇನೆ ನಾನು ಆ ಹೃದಯವನು
ನಾ ಮಾತ್ರ ಕಾಣುವೆನದರಲ್ಲಿ
ಇಲ್ಲಿಯೂ ಕಷ್ಟವೇ
ನನ್ನ ನಾ ಕಾಣುವೆ ಪ್ರತಿ ಹೃದಯದಲಿ !

------------------------------------------------------------------
cheluveyariddarilli aneka
kashtaveenendare
yaarannu nannavaLendu tiLiyali !
huDukutteene naanu aa hRdayavanu
naa maatra kaaNuvenadaralli
illiyuu kashtave
nanna naa kaaNuve prati hRdayadali !

ಮೂಕ್ಷದಾಸೆ

ಬದುಕು ಬಹಳ ಉಲ್ಲಾಸಮಯವಾದುದಾಗಿದೆ
ನಮಗೆ ಮೋಕ್ಷವೆಂಬ ದೂರದ ಚಂದಿರನೇತಕೆ ಬೇಕು?
ತನ್ನೆದುರಿನ ಪಾಯಸದ ರುಚಿ ಸವಿಯದವಗೆ
ಸಮುದ್ರದಲಿ ಮಥಿಸಿದ ಅಮೃತವೇಕೆ ಬೇಕು ?

-----------------------------------------------------------------------------------------
baduku bahala ullasamayavaadudaagide
namage mokshavemba duurada chandiranetake beku?
tannedurina paayasada ruchi saviyadavage
samudradali mathisida amRtaveke beku ?

ಮುಂದಾಲೋಚನೆ

ನನಗೂ ನಿನಗೂ ತೀರ ಹೊಂದಿಗೆಯಾಕುವುದು ಕಷ್ಟವೆಂದೇ ನನ್ನ ಎಣಿಕೆ
ಅದಕೆಂದೇ ಒಂದು ಚಾಪೆ, ಎರಡು ಹೊದಿಕೆ ಕೊಂಡು ಕೊಂಡಿದ್ದೇನೆ !

------------------------------------------------------------------------------------------------------------
nanaguu ninagu tiira hondigeyaakuvudu kashtavende nanna eNike
adakende ondu chaape, eraDu hodike konDu konDiddene !

ಜೀವನ

ಕೆಲವರಿಗೆ ಪಕ್ಚಡಿಯಂತಿಹುದು
ಹಸಿಕಡಿಯಂತಿಹುದು ಮತ್ತೆ ಹಲವರಿಗೆ
ಜೀವನದ ರಸ ರುಚಿಯ ಪಕ್ವಾನ್ನವು
ಹದ ಬೆಂದಂತಿಕ್ಕು ಮಿಕ್ಕ ಕಲಿಗಳಿಗೆ !

------------------------------------------------------------------
kelavarige pacchadiyantihudu
hasikaDiyantihudu matte halavarige
jeevanada rasa ruchiya pakvaannavu
hada bendantikku mikka kaligaLige !

ಧರ್ಮ ಸಂಕಟ

ನಿಮಗರ್ಥವಾಗುವಂತೆ ನಾ ಕವಿತೆ ಬರೆಯುವುದಿಲ್ಲ
ನನಗರ್ಥವಾದರೆ ಅದು ರುಚಿಸುವುದಿಲ್ಲ
ಅರ್ಥಾನರ್ಥಗಳ ಈ ತಾಕಲಾಟದಲ್ಲಿ
ನಿಜವಾಗಿ ಸೊರಗಿಹುದು ಕವಿತೆ ಮಾತ್ರ !

----------------------------------------------------------------------------
nimagarthavaaguvante naa kavite bareyuvudilla
nanagarthavaadare adu ruchisuvudilla
arthaanarthagaLa taakalaaTadalli
nijavaagi soragihudu kavite maatra !

ಪರಿಣಾಮ

ಗಂಡ ಹೆಂಡಿರ ಜಗಳದಲ್ಲಿ
ಕೂಸು ಕಾನ್ವೆಂಟು ಸೇರಿತು
------------------------------------------
-----
ganDa henDira jagaLadalli
kuusu kaanventu seritu

Monday, November 24, 2008

ಮತ್ತೊಂದು ಸ್ವಾತಂತ್ಯ್ರ

ವಂದೇ ಮಾತರಂ
ಗದ್ದಲದಲ್ಲಿ
ಬಾಟಲಿಯ ರಂ
ಮುಗಿದದ್ದು
ಗೊತ್ತೇ ಆಗಲಿಲ್ಲ !
------------------------------
vandee matarAn
na gaddaladalli
baaTaliya ram
mugidaddu
gottee aagalilla !

ಭಾವ ಭ್ರಮಾ ಜೀವಿ

ನಾನು ನಿನಗಾಗಿ
ಭಾವ ಭ್ರಮಾ ಜೀವಿಯಾಗ ಬಯಸುವುದಿಲ್ಲ ಮತ್ತೊಮ್ಮೆ

ಆದರೆ ಏನು ಮಾಡೋಣ?
ವಾಸ್ತವಿಕತೆಯ ಕಠೋರ ವಿವಶತೆಗೆ
ಕೆಲವೊಮ್ಮೆ ಸಿಕ್ಕು ಮುಳುಗುವಾಗ
ನಿನ್ನ ತೊಳ್ತೆಕ್ಕೆಗಿಂತ
ಭಾವನೆಗಳ ಮೃದು ಅಪ್ಪುಗೆ
ಹಿತವೆನಿಸುತ್ತದೆ !!

ಕನಿಷ್ಠ ಕನಸುಗಳಿಗಾದರೂ
ತಡೆಹಾಕದಿರು
ಹೃದಯ ಒಪ್ಪದಿದ್ದರೂ
ಮನಸು ತುಂಬ ಹರಿದು ಬರುತ್ತಿರುವುದು
ಸದ್ಯಕ್ಕೆ ಅದೊಂದೀ !

ಪ್ರಾಪಂಚಿಕತೆಯ ಎಲ್ಲೆಗೆಲ್ಲವನೂ ಮೀರಿ
ಕನಸಿನ ತೊಟ್ಟಿಲು
ಉಯ್ಯಾಲೆಯಾಡುತ್ತಿರುವುದ ನೋಡುವುದು
ನನಗೆ ಬಲು ಹಿತವೆನಿಸುತ್ತದೆ
ಬಿರಿಯದ ಹೂವಿನ ಜೀಕಾಟ
ಬಣ್ಣ ಎರಚುತ್ತದೆ

ಮೊದಲೊಮ್ಮೆ ಭಾವ ಜೀವಿಯಾಗಿದ್ದಾಗ
ನನ್ನ ಹೃದಯದ ಪ್ರೇಮ ಕಣಿವೆಗಳಲ್ಲಿ
ನಿನ್ನ ಸಕಲ ಸುಮಗಳ ರಥದಲ್ಲಿ ಕುಳ್ಳಿರಿಸಿ ಜೀಕಿದ್ದೆ
ಮನದ ಭಾವನೆಗಳ ಮುತ್ತುಗಳ ಬೊಗಸೆ ತುಂಬ
ನಿನಗೆ ಕೊಟ್ಟಿದ್ದೆ

ಈಗ ಮತ್ತೊಮ್ಮೆ ಅದೇ ನೆನಪುಗಳ ಮೀಟಿ
ವಿರಹದ ವಿಕಾರ ಗೀತೆ
ಬೇಡ ಬೇಡವೆಂದರೂ ಹರಡಿದೆ
ಪಂಚೇಂದ್ರಿಯಗಳನು ತಟಸ್ಥೀಕರಿಸುವುದು ಒಳಿತು
ಈಗಿಂದ ನಾ
ಭ್ರಮಾ ಜೀವಿಯಾಗುತ್ತಿದ್ದೇನೆಯೇ ಎಂಬ ಶಂಕೆಯಿದೆ !

ಮನುಜರೆಲ್ಲರು ಭ್ರಮಾ ಜೀವಿಗಳೋ
ಪ್ರೇಮಿಗಳು ಭ್ರಮಾಜೀವಿಗಳೊ
ಒಂದು ಅರಿಯದೇ ತೊಯ್ದಾಡುವ ಜೀವಿ
ಭಾವನೆಗಳಲಿ ತೀಲಿ ಹೋಗುವ ಹೆದರಿಕೆ

ಆದರೂ.............
ಮತ್ತೆ ನಾ ಭಾವ ಜೀವಿಯಾಗ ಬಯಸುವುದಿಲ್ಲ !!

---------------------------------------------------------------------------------
naanu ninagaagi
bhaava bhrama jeeviyaaga bayasuvudilla mattomme
aadare enu maadooNa?
vaastavikateya kaThora vivashatege
kelavomme sikku muLuguvaaga
ninna toLtekkeginta
bhaavanegala mRdu appuge
hitavenisuttade

kanishta kanasugaLigaadaru
taDehaakadiru
hRdaya oppadiddaru
manasu tumba haridu baruttiruvudu
sadyakke adondee !
praapanchikateya ellegaLellavanuu miiri
kanasina toTTilu
uyyaaleyaaDuttiruvuda nooDuvudu
nanage balu hitavenisuttade
biriyada huuvina jiikaaTa
baNNa erachuttade

modalomme bhava jiiviyaagiddaga
nanna hRdayada premakaNivegaLalli
ninna sakala sumagaLa rathadalli kuLLirisi jeekidde
manada bhaavanegaLa muttugaLa bogase tumba
ninage koTTidde

iiga mattomme adee nenapugaLa miiti
virahada vikaara giite
beeda bedavendaru haraDide
paAnchendriyagaLanu taTasthiikarisuvudu oLitu
iiginda naa
bhramaa jiiviyaaguttiddeneyee emba shankeyide !

manujarellaru bhramaa jiivigaLo
preemigaLu bhramaajiivigaLo
ondu ariyade toydaaDuva jiivi
bhaavanegaLali teeli hoguva hedarike
aadaruu.............
matte naa bhaava jiiviyaaga bayasuvudilla !!

ನಾಯಿಪಾಡು

This song was aired at Air India Station, Mangalore on 31st of december 1998, night 8 o'clock as part of the welcome 2000 program. It was named 'yuva kavi goshti'. I presented total 5 songs (i don't remember exactly) and i will publish here remaining songs well. I was paid Rs.220 (ofcourse not 420 !! )for that program !! Pretty good amount for that time !! I still remember that day...... got hold of a bus which goes to udupi... i got down at a stop which is next to Karnataka Polytechnic College.... i suppose to reach Air India center at 10 clock.... and i was outside Air India at around 8.30 itself.....!!! Then waited for the lecturer Mr.Dhananjay Kumble (no words to greet him ) who accompanied us to Air India station... Then of course everything went well .... a memorable experience of a radio station !


ಬೀದಿಯಲ್ಲಿ ಒಂದು ನಾಯಿ ಮರಿ ಕುಯ್ಯಿ ಎನ್ನುತ ಸಿಕ್ಕಿತು
ಬಿಳಿ ಬಿಳಿ ರೋಮ, ಮುದ್ದು ಮುದ್ದು ನನ್ನ ಮಗನಂತೆ
ಯಾರು ಬಿಟ್ಟರೋ, ಯಾಕೆ ಬಿಟ್ಟರೂ...... ಹೆಣ್ಣಿರಬೇಕು !
ಆದರೇನು ಕರುಣೆಯಿರಬೇಕಾಗಿತ್ತು, ನಾನು ಮನೆಗೆ ಕೊಂಡೊಯ್ದೆ

ಮಗ ಸಣ್ಣವ, ಇಷ್ಟ ಪಟ್ಟ, ತನ್ನಂತೆ ಸಣ್ಣಗಿರುವ ನಾಯಿ ಮರಿ
ಆಡಲಾಯ್ತು ಒಂದು ಜೊತೆ, ಓರಗೆಯ ಮಕ್ಕಳೊಡನೆ
ಅವರೊಡನೆ ಕೋಪವಾದರು ಮನೆಯಲ್ಲೇ ಆಡಬಹುದು ಆಟ ಹೂಟ
ಹಾಗೆ ಅವನು ಅವನಾಟಕ್ಕೊಸ್ಕರ ನಾಯಿಗೆ ಅನ್ನಯಿಕ್ಕಿದ, ಹಾಲೆರೆದ

ಇತ್ತ ಹೆಂಡತಿಯದೊಂದು ಕಿಚ ಕಿಚಾಯಿಸುವಿಕೆ
ಹೆಣ್ಣಾದರೆ ಬೀದಿಗಿರಲಿ, ಗಂಡಾದರೆ ಬೊಗಳುವುದಕ್ಕೆ ಮನೆಗಿರಲಿ !
ನೀನು ಹೆಣ್ಣು ಎಂದರೆ ನಾ ನಾಯಿ ಮರಿಯಲ್ಲ ಎಂದಳು
ಗಂಡಾಗಿ ನಾ ಯೋಚಿಸಿದೆ ಹೆಣ್ಣಾಗಿ ನಾಯಿ ಮರಿ ಹುಟ್ಟಬಾರದೆ?

ನಾಯಿ ಬೆಳೆಯಿತು, ಹದಿಪ್ರಾಯದ ಯುವತಿಯಂತೆ ಕಳೆಗಟ್ಟಿತು
ಅದೆಲ್ಲಿ ಸಹಚರನ ಕಂಡಿತೋ, ಕೆಲದಿನಗಳಲ್ಲಿ ಗರ್ಭಿಣಿಗೆ ಉಪಚಾರ
ಹೆತ್ತದ್ದು ಎರಡು ಹೆಣ್ಣು, ನಾಲ್ಕು ಗಂಡು, ಗಂಡು ಮಾರಿ ನಾಲ್ಕು ಕಸಾಯಿತು !
ಸತಿ ಸುತರ ಅಪ್ಪಣೆಯಂತೆ ಹೆಣ್ಣು ನಾಯಿಗಳ ಅದೇ ಬೀದಿಯಲಿ ಬಿಟ್ಟು ಬಂದೆ !!

----------------------------------------------------------------------------------------------------------------------
biidiyalli ondu naayi mari kuyyy ennuta sikkitu
biLi biLi rooma, muddu muddu nanna maganante
yaaru biTTaro, yaake biTTaroo...... heNNIrabeku !
aadarenu karuNeyirabekaagittu, naanu manege kondoyde

maga saNNava, ishta patta, tannante saNNagiruva naayi mari
aaDalaaytu ondu jote, orageya makkaLoDane
avaroDane koopavaadaru maneyalle aaDabahudu aaTa hooTa
haage avanu avanaaTakkoskara naayige annayikkida, haalereda

itta henDatiyadondu kicha kichaayisuvike
heNNadare biidigirali, ganDadare bogaLuvudakke manegirali !
niinu heNNu endare naa naayi mariyalla endaLu
ganDaagi naa yoochiside heNNaagi naayi mari huTTabarade?

naayi beLeyitu, hadipraayada yuvatiyante kaLegaTTitu
adelli sahacharana kaAnDitoo, keladinagaLalli garbhiNige upachaara
hettaddu eradu heNNu, naalku ganDu, ganDu maari naalku kasaayitu !
sati sutara appaNeyante heNNugaLa naayigaLa ade biidiyali biTTu bande !!


ಉರಗಾಮಿ

ನನ್ನ ಕವಿತೆಗಳಿಗೆ
ಚುರುಕುತನ ಎಲ್ಲಿಂದ
ತರಲಿ ಸ್ವಾಮೀ?
ಮೌನವಾಗಿಯೇ
ಸಿಡಿಯುವನಲ್ಲವೀ
ಉಗ್ರಗಾಮಿ !

----------------------------------------
nanna kavitegaLige
churukutana ellinda
tarali swaamii?
mounavaagiye
sidiyuvanallavee
ugragaami !

ಇಷ್ಟೆಲ್ಲಾ ಪ್ರೀತಿ ಏಕೆ?

ನಿನ್ನೊಡನೆ ಅಂದು ಮಾತಾಡಲಿಲ್ಲ
ಆದಕೀಕೆ ಕೋಪ ಇಷ್ಟೆಲ್ಲಾ

ಮಾತಾಡುವುದೆನಿದೆ ಹೇಳು
ಸುಮ್ಮ ಸುಮ್ಮನೆ ನೆಪ ಸಲ್ಲ
ಪರಸ್ಪರ ಹೃದಯಗಳ ಸಲ್ಲಾಪಕ್ಕೆ
ಏನು ಕೊರತೆಯಿಲ್ಲ

ಬರಿ ಮಾತಿನೊಳಗೇನಿದೆ ಹೇಳು
ಮೌನದೊಳಡಗಿದೆ ಸುಖದ ಬಾಳು

ಮೌನ ಚಿಪ್ಪಿನೋಳಗಿಹ ಪ್ರೀತಿಯ ಒಲಿಸು
ಸುಪ್ತದೊಳದಗಿಹ ಆರಾಧನೆಯ ಗ್ರಹಿಸು

ಬಲು ಮಾತಿನೊಳಗಿರುವ ಸ್ಮಶಾನ ಮೌನಕಿನ್ತಲೂ
ಮೌನ ಪರದೆಯಡಿ ಪಿಸು ಮಾತು ಚೆಂದ !

ಸುಖ ದುಃಖ ಹಂಚುವ ಮೌನವಾಗಿಯೇ
ಪ್ರೀತಿ ಮಾತುಗಳೆಲ್ಲವೂ ಮೌನವಾಗಿಯೇ

ನನ್ನೊಡನೆ ಯಾಕೆ ಅಂದು ಮಾತಾಡಲಿಲ್ಲ
ಎಂದು ನೀ ಮುಂದೆ ದೂರಬಾರದಲ್ಲ
ಅದಕೀ ಈ ಪ್ರೀತಿ ಇಷ್ಟೆಲ್ಲಾ !

--------------------------------------------------------------------
ninnoDane aAndu maataDalilla
adakeeke koopa ishtella

maataaDuvudenide heeLu
summa summane nepa salla
paraspara hRdayagaLa sallapakke
enu korateyilla

bari maatinoLageenide heLu
mounadoLaDagide sukhada baaLu

mouna chippinoLagiha priitiya olisu
suptadoLaDagiha aaraadhaneya grahisu

balu maatinoLagiruva smashaana mounakintaluu
mouna paradeyaDi pisu maatu chenda !

sukha duHakha haAnchuva mounavaagiye
priiti maatugaLellavu mounavaagiye

nannoDane yaake aAndu maataaDalilla
endu nii munde duurabaaradalla
adakee ii priiti ishtella !

ಬದುಕು

ಥಿಯರಿಯೇ
ಇಲ್ಲದ
ಪ್ರಾಕ್ಟಿಕಲ
ತರಗತಿಗಳು !
-----------------------------
theoriye
illada
praactical
taragatigaLu !

ವಿಪರ್ಯಾಸ

ಒಂದು ದಿನದ ಮನುಕುಲದ ಕಥೆಯಿದು
ಮನುಕುಲದ ಹೋರಾಟದ ವ್ಯಥೆಯ ಮುಖವಿದು
ಈ ಜಗದ ರೀತಿ ಇದೆಯೋ ಏನೋ?
ಒಂದೆಡೆ ಸಿಡಿದು ಪುಡಿಯಾಗುವ ಕಂಬನಿಗಳಾದರೆ
ಮಗದೊಂದೂರಿನಲಿ ಮೋಜು ಮಸ್ತಿ ಕೇಕಿ ಘರ್ಜನೆ

ಒಂದು ದಿನ ಬಸ್ಸಿಗಾಗಿ ಒಂದು ಕಡೆ ಕಾಯುತಲಿದ್ದೆ
ನನ್ನೂರಿನ ಹೆಸರು ತಗಲಿಸಿದ ಬಸ್ಸಿನ ನಿರುಕಿಸುತಲಿದ್ದೆ
ಜನವೋ ಜನವಲ್ಲಿ ನಿರೀಕ್ಷೆಯ ದಿಟ್ಟಿಯೊಂದಿಗೆ
ಎಲ್ಲವೂ ನಾಟಕ ಶಾಲೆಯ ಗೊಂಬೆಗಳಂತೆ ಹೊಯ್ದಾಡುತ್ತಿವೆ

ಅದೇಕೋ ನನ್ನ ದಿಟ್ಟಿ ಬಲು ದೂರ ಹಾಯಿತು
ಯಾವತ್ತು ಯೋಚಿಸದ ನೋಡದ ದೃಶ್ಯ ಕಣ್ಕಟ್ಟಿತ್ತು
ಕಣ್ಣಿಗೆ ನಿಲುಕದ ದೂರದಲೊಂದು ನಾಟಕ ನಡೆಯುತಲಿತ್ತು
ಸಣ್ಣ ಗುಂಪಿನೊಳಗೋಡಿದ ದಿಟ್ಟಿ ಮಿದುಳಿನೊಳಗೆ ಅಚ್ಚೋತ್ತಿತು

ಅಲ್ಲೊಂದು ಗುಂಪು ನೆರೆದಿತ್ತು, ಬಹುಷಃ ಭಿಕ್ಶಕರಿರಬೇಕು
ಅಲ್ಲ ಅಲೆಮಾರಿಗಳೋ.... ಅಂತೂ ತುತ್ತು ಕೂಳಿನ ಹೋರಾಟಗಾರರು
ಅಲ್ಲಲ್ಲಿ ಇಣುಕುವವರು, ಬಿದ್ದಲ್ಲಿ ಹೆಕ್ಕುವರು
ಅಂತಿರುವವರದೇನೋ ಪ್ರದರ್ಶನದ ಸಿದ್ಧತೆ ನಡೆದಿತ್ತು

ಹರಿದ ಬಟ್ಟೆಯ ಧರಿಸಿದಂತಹ ಬಾಲೆಯೋರ್ವಳು ಇದ್ದಳು
ಅವಳಿದ್ದೆಡೆಗೆ ಕೈಯ ತೋರಿಸಿ ನುಡಿಯುತಲಿದ್ದನು ಓರ್ವನು
ಬನ್ನಿರಣ್ಣ, ನೋಡಿರಣ್ಣ... ನಮ್ಮ ಈ ಚಮತ್ಕಾರವ
ಜಗವು ಅರಿಯದ, ನಿಮಗೆ ತಿಳಿಯದ ಬಾಲೆಯ ಸಾಮರ್ಥ್ಯವ

ರಕುತವಿಲ್ಲವೀ ಚಿಗುರು ಮೊಗದಲಿ, ಹೀರಿ ಕುಡಿದರೂ ನಾ ಕಾಣೆ
ಮೇಲೆ ನೋಡ್ದಳು, ಹಿರಿಯರ ನಿಟ್ಟಿಪಳು, ಅದೇನು ಕಾದಿದೆಯೋ ಈ ಕುವರಿಗೆ?
ಸುತ್ತ ನೆರೆದ ಜನರ ನೋಡುತ ಬಾಲಕಂಗಳು ಸಿಡಿದವು
ನಾಲ್ಕು ಕಾಸು ಬಿದ್ದರಲ್ಲಿಗೆ ಒಂದು ಹೊತ್ತಿನ ಸಂಕಟ ಕಳೆಯಿತು

ಮಲಗು ಎಂದನು, ಮಲಗಿ ಬಿಟ್ಟಳು, ದೂರದಾಗಸ ಖಾಲಿ ನೀಲಿ
ಹೊಟ್ಟೆ ಮೇಲೆ ಬಟ್ಟೆ ಇತ್ತರು, ಅದರ ಮೇಲೆ ಕಲ್ಲು ಚಪ್ಪಡಿ
ಅದರ ಮೇಲೆ ಇನ್ನೆರಡರಟ್ಟಿ, ಹೊಟ್ಟೆಗಿಲ್ಲ ಚೂರು ರೊಟ್ಟಿ
ನೋಡಿರಣ್ಣ ಇಲ್ಲಿಯೇ, ಒಡೆವೆ ಇದನೀಗ ಕುಟ್ಟಿ ಕುಟ್ಟಿ

ಎದ್ದ ಸುತ್ತಿಗೆ ಬಿದ್ದ ಪೆಟ್ಟಿಗೆ ಕಲ್ಲು ಚಪ್ಪಡಿ ಪುಡಿ ಪುಡಿ
ಏಟು ಬಿದ್ದುದು ಕಲ್ಲಿಗೂ, ಹೊಟ್ಟೆಗೂ....ಬದುಕಿಗೂ??
ಬಾಲ ಕಂಬನಿ ಸಿಡಿಯಿತೂ... ಕಣ್ಣ ಬಿಂಬ ಒಡೆಯಿತೋ...
ನೋಡಿರಣ್ಣ, ಕಾಣಿರಣ್ಣ ಸಣ್ಣ ಬಾಲೆಯ ಚಮತ್ಕಾರವ

ಹೆಣ್ಣಿನುದರಕೆ ಏನು ಶಕ್ತಿಯೂ ಬದುಕಿಗಾಗಿನ ಯುಕ್ತಿಯೂ
ಕೂಳಿಗಾಗಿನ ಈ ಪರಿಯ ಹೋರಾಟ ಪ್ರಕೃತಿಯ ಅನಿವಾರ್ಯ ರೀತಿ ನೀತಿಯೇ?
ಅಲ್ಲಿ ಒಂದೆಡೆ ಬಾಂಬು ಸಿಡಿವುದು, ಇಲ್ಲಾದರೋ ಬದುಕೇ ಮಡಿವುದು
ಮನುಕುಲದ ವಿಪರ್ಯಾಸವೂ, ಅಲ್ಲ ಬದುಕಿನ ಪರಿಹಾಸವೋ?

-----------------------------------------------------------------------------------------
ondu dinada manukulada katheyidu
manukulada hOraatada vyatheya mukhavidu
ii jagada riiti ideyoo enO?
ondeDe siDidu puDiyaaguva kambanigaLadare
magadondurinali mooju masti keeki gharjane

ondu dina bassigaagi ondu kade kaayutalidde
nannurina hesaru tagalisida bassina nirukisutalidde
janavoo janavalli niriiksheya diTTiyondige
ellavuu naataka shaaleya gombegaLaAnte hoydaaDuttive

adeekoo nanna diTTi balu duura haayitu
yaavattu yoochisada nooDada dRshya kankaTTittu
kaNNige nilukada duuradalondu naaTaka naDeyutalittu
saNNa gumpinoLagoDida diTTi miduLinoLage acchottitu

allondu gumpu neredittu, bahushaHa bhiksukarirabeku
alla alemaarigaLo.... antuu tuttu kuuLina hooraaTagaararu
allalli iNukuvavaru, biddalli hekkuvaru
aAntiruvavaradeenoo pradarshanada siddate naDedittu

harida baTTeya dharisidantaha baaleyorvaLu iddaLu
avaLiddeDege kaiya torisi nuDiyutaliddanu orvanu
banniraNNa, keLiraNNa... namma ii chamatkaarava
jagavu ariyada, nimage tiLiyada baaleya saamarthyava

rakutavillavii chiguru mogadali, hiiri kuDidaroo naa kaaNe
meele noDdaLu, hiriyara niTTipaLu, adeenu kaadideyo ii kuvarige?
sutta nereda janara nooduta baalakangaLu siDidavu
naalku kaasu biddarallige ondu hottina saAnkaTa kaLeyitu

malagu endanu, malagi biTTaLu, duuradaagasa khaali niili
hoTTe mele baTTE iTTaru, adara mele kallu chappaDi
adara mele inneraDaraTTi, hoTTegilla chuuru roTTi
nooDiraNNa illiye, oDeve idaniiga kuTTi kuTTi

edda sittige bidda peTTige kallu chappaDi puDi puDi
eTu biddudu kalligoo, hoTTegoo....badukigoo??
bala kambani siDiyitoo... kaNNa bimba oDeyito...
nooDiraNNa, kaaNiraNNa saNNa baaleya chamatkaarava

heNNinudarake enu shaktiyo badukigaagina yuktiyoo
kuuligaagina ii pariya hooraaTa prakRtiya anivaarya riiti niitiyee?
alli ondeDe baambu siDivudu, illadaro baduke maDivudu
manukulada viparyaasavoo, alla badukina parihaasavo?

ಇವಳ ನೋಡ ಹೋದ ಕಥೆ

ಇವಳ ನೋಡಲು ಹೋದ ಕಥೆ ಬಹಳ ಸೊಗಸಿಹುದು
ಹುಡುಗಿ ಹಳೆ ಹೊಸತುಗಳ ಸಂಗಮ ಇದು ದಲ್ಲಾಳಿ ಹೇಳಿಹುದು

ಗಾಡಿಯಿಂದಿಳಿದು ಮನೆ ಕಡೆ ನೋಡಿದೆ ಕಾಣುವಳೆ ಅವಳೆಲ್ಲಾದರೂ
ಬನ್ನಿ ಬನ್ನಿರೆಲ್ಲರು ಎಂದೆನುತ ಸ್ವಾಗತಿಸಿದರು (ಭಾವಿ) ಅತ್ತೆ ಮಾವನವರು !

ಪಯಣ ಸುಖವಾಯಿತೆ ಕೈ ಕಾಲು ತೊಳೆದುಕೊಳ್ಳಿರಿ ಏನು ಸಂಭ್ರಮೊಪಚಾರ
ನನಗೋ ಲಗುಬಗೆಯಲಿ ಮನೆಯೊಳ ಸೇರುವಾಸೆ ತಂಗಿ ಚಿವುಟಿದಳು ಏನಣ್ಣ ಆತುರ?

ಈ ಹುಡುಗಿ ಎಂತಿಹಳೋ, ಭಗವಂತ ಕಾಪಾಡು, ಏಕಿನ್ನು ಬರಲಿಲ್ಲ ಪಾನೀಯ?
ಹುಡುಗಿ ಬಂದಳು, ಹೊಳೆವ ಕಂಗಳು, ಪೂರ್ಣ ತಿಂಗಳು, ನಾನೋಡಿ ಸ್ತಬ್ಧ ಅಪ್ಸರೆಯ !

ತೆಗೆದುಕೊಳ್ಳಿರಿ ಪೇಯ, ತಣಿಯಿತೆ ದಾಹ, ಉಪಚಾರ ಸಾಗಿತ್ತು ಮನೆ ಮಂದಿಗೆಲ್ಲ
ತಣಿವುದೆಂತೀ ದೃಶ್ಟಿದಾಹ, ಹೋದಳೆ ಒಳಗೆ, ಕಿಟಕಿಯಲಿ ಇಣುಕಿದಳಲ್ಲ ??

ಸ್ವಲ್ಪ ಕಳೆದು ಕೊಟ್ಟರವಕಾಶ ಮಾತಾಡಿಕೊಳ್ಳಿರಿ ಕೂಸು ಮಾಣಿಯರು !
ಮುಗುಳ್ನಕ್ಕು ನಸು ನಾಚಿ ಹೇಳಿದುದು ಎರಡೇ ಮಾತು "ಈ ಮನೆ ಎನಗಿನ್ನು ತವರು" !!

ಇನ್ನು ಹೇಳಲು ಏನಿದೆ ಎನಗೆ ಎಲ್ಲವು ದೈವೇಚ್ಚೆಯಂತೆ ನಡೆದುದು !
ಮಗದೆರಡು ತಿಂಗಳ ವಿರಹ ಕಳೆದ ನಂತರವೇ ಕೋಮಲಾಂಗಿ ನನ್ನ ಮಡದಿ ಆದುದು !!

------------------------------------------------------------------------------------------------------------------------------------
ivaLa nOdalu hOda kathe bahaLa sogasihudu
huDugi haLe hosatugaLa sAnngama idu dallaLi heeLihudu

gaaDiyindiLidu mane kaDe noDide kaaNuvaLe avaLellaadaru
banni bannirellaru endenuta swaagatisidaru (bhaavi) atte maavanavaru !

payaNa sukhavaayite kai kaalu toledukoLLiri enu sAnbhramoopachaara
nanagoo lagubageyali maneyoLa seruvaase tangi chivutidaLu enaNNa aatura?

ee huDugi entihaLo, bhagavanta kaapaaDu, ekinnu baralilla paaniiya?
huDugi baAndaLu, hoLeva kAngalu, poorna tingaLu, naanoDi stabdha apsareya !

tegedukoLLiri peya, taNiyite daaha, upachaara saagittu mane maAnndigella
taNivudeAntii dRshTi daaha, hodaLe oLage, kitakiyali iNukidaLalla ??

swalpa kaLedu koTTaravakaasha maataDikoLLiri kusu maaniyaru !
muguLnakku nasu naachi heLidudu eraDe maatu "ii mane enaginnu tavaru" !!

innu heLalu enide enage ellavu daiveccheyante naDedudu !
magaderaDu tingaLa viraha kaLeda nantarave koomalaAngi nanna maDadi aadudu !!

ಜಡತ್ವ

ನಾನು ಸ್ವಲ್ಪ ಮುಂದಡಿಯಿಡಲು ಬಯಸಿದೆ
ಮೊದಲ ಬಾರಿ ತಿಳಿದೆ, ಮುಂದೆ ಕತ್ತಲಿದೆಯೆಂದು !

ಸರಿ, ನೋಡೋಣ ಬೇರೆ ದಾರಿ, ಒಂದಡಿ ಹಿಂದಿಟ್ಟೆ
ಎರಡನೆಯ ಬಾರಿ ಅರಿತೆ, ಹಿಂದೆಯೂ ಕತ್ತಲಿದೆಯೆಂದು !

ನನ್ನ ಹಣೆಬರಹ ಇಷ್ಟೆಂದು ನಿಂತಲ್ಲೇ ನಿಂತೆ
ಮೂರನೇ ಬಾರಿ ಅರ್ಥೈಸಿದೆ ಇಲ್ಲಿ ಬೆಳಕಿಲ್ಲವೆಂದು !!

ನಾಲ್ಕನೆಯ ಹೆಜ್ಜೆ ಇಡಲಿಲ್ಲ, ಇದ್ದಲ್ಲಿ ಇದ್ದೇನೆ
ಜಗವನ್ನೇ ದೋರುತ್ತೇನೆ
ಇರುವೆ ಹರಿವ ಕಾಲುಗಳ ಕೊಡವುತ್ತೇನೆ !

-------------------------------------------------------------------
naanu swalpa muAndaDiyiDalu bayaside
modala baari tiLide, muAnde kattalideyendu !

sari, nooDooNa bere daari, ondaDi hindiTTe
eraDaneya baari arite, hindeyuu kattalideyendu !

nanna haNebaraha ishtendu nintalle ninte
muuranee baari artaiside illi beLakillavendu !!

naalkaneya hejje iDalilla, iddalli iddene
jagavanne doorutteene
iruve hariva kaalugaLa koDavutteene !

ನಮ್ಮೊಲವ ಬೆಸುಗೆಗೆ, ಭಗವಾನ್ ನೀನೆ ಸಾಕ್ಷಿ

ಅವಗೆಮ್ಪಿನ ಬೈಗಿನರಮನೆಯೋಳು
ಮುಂಗುರುಳು ಹಾರುತಿದೆ ಸಸ್ಯ ಶಾಮಲೆಯ
ನಿತ್ಯ ಸುಂದರ ನಿನ್ನ ನಯನ ಮಂದಿರ
ಗರ್ಭ ಗುಡಿಯೋಳದಗಿದೆ ಎನ್ನ ಹ್ರದಯ

ಜೀನ ಹನಿ ತನಿ ಗಂಧ ಚಂದನ
ಪ್ರಣಯ ವೇದನೆ ನಿನ್ನ ನಿದುಸುಯ್ಳು
ಕನ್ನಕಪ್ಪಿನೆದೆ ಹರಿವ ಹಸಿ ಬಿಸಿ ವೇದನೆ
ಎನ್ನೆದೆಯೋಲಿಲಿದವೂ ಜುಳು ಜುಳು

ನಿನ್ನ ಭಾವ ಸಾಗರವೆನಿತು ಹಿರಿದೂ
ನಿನ್ನ ವಿರಹವೆನ್ನ ಮಾನವ ಕಪ್ಪಿಟ್ಟಿತು
ನಿನ್ನ ನಗೆ ಜ್ಯೋತ್ಸ್ನದಲೇ ಪವಡಿಸೆ ನಾನು
ನಿನ್ನೆದೆಯ ಮಲ್ಲಿಗೆ ಕನವರಿಸಿತು

ಈ ಮಿಥ್ಯ ಜಗ ಪರರಿಗಿರಿಲಿ, ಶಶಿ ರವಿ ಮಲಗಿರಲಿ
ನಮ್ಮೊಲವ ಬೆಸುಗೆಗೆ, ಭಗವಾನ್ ನೀನೆ ಸಾಕ್ಷಿ
ರಜನಿಯುರುಳಲಿ, ಉಷೆಯು ಅರಳಲಿ
ನೀನಚ್ಚ ಕುವರಿಯೇ, ಲಜ್ಜೆ ಬಿಡದು ಕಾಮಾಕ್ಷಿ

--------------------------------------------------------------------------
avagempina baiginaramaneyoLu
munguruLu haarutide sasya shaamaleya
nitya sundara ninna nayana mandira
garbha guDiyoLaDagide enna hRdaya

jeena hani tani gandha chandana
praNaya veedane ninna niDusuylu
kaNNakappineDe hariva hasi bisi vedane
ennedeyoLiLidavoo juLu juLu

ninna bhaava saagaravenitu hiridoo
ninna virahavenna manava kappiTTitu
ninna nage jyotsnadale pavadise naanu
ninnedeya mallige kanavarisitu

ii mithya jaga pararigirili, shashi ravi malagirali
nammolava besugege, bhagavan neene saakshi
rajaniyuruLali, usheyu araLali
neenaccha kuvariye, lajje biDadu kaamaakshi

ಒಳಮರ್ಮ

ಕಾರಿರುಳು ಮಧ್ಯದಲೊಂದು ಉರಿಯುತಿದೆ ಹಣತೆ
ಕಾರ್ಮುಗಿಲ ಗರ್ಭದೊಳಗಿಂದ ಸುರಿದಂತೆ ಒರತೆ

ನಾಲ್ಕಾರು ಮಿಡತೆಗಳು ಮುತ್ತಿಕ್ಕಿದವು
ಹಣತೆಯಲಿ ಕೆಂಬಣ್ಣ ಜ್ವಾಲೆ ಮೇಲೇರುತಿದೆ
ತನ್ನದಿಗೆ ಇಹುದು ಬಹುದೊಡ್ಡ ಭೂಮಿ
ತಾ ಮಗುಚಿ ಬಿದ್ದರೆ ಮಿಡತೆಗಳು ಎಲ್ಲೂ !

ಹೀಗರಿತೀತು ಆ ಪಾಪದ ಜೀವಿ?
ಈ ಹಣತೆ ತಣ್ಣನೆ ನುನ್ಗುವುದೆಂದು
ಸತ್ತು ಬಿದ್ದರೆ ಹಣತೆಯ ಕೆಳಗಿಹುದು ಬರಿ ಕರಿ ನೆರಳು !
ಒಳಮರ್ಮ ಬೇರಿಹುದು ಹೊರ ಬಣ್ಣ ಬಲು ಸೊಗಸು !

--------------------------------------------------------------------------
kaariruLu madhyadalondu uriyutide haNate
kaarmugila garbhadoLaginda suridante orate

naalkaaru miDategaLu muttikkidavu
haNateyali kembaNNa jwaale melerutide
tannaDige ihudu bahudoDDa bhoomi
taa maguchi biddare miDategaLu elloo !

heegaritiitu aa paapada jeevi?
ii haNate tannane nunguvudendu
sattu biddare haNateya keLagihudu bari kari neraLu !
oLamarma berihudu hora baNNa balu sogasu !




Love Theme

ಪ್ರೀತಿ ಮಾತನು ಹೇಳಲೆಂದೇ
ಮಲ್ಲಿಗೆಯ ನಾ ತಂದಿರುವೆ
ಅನುದಿನವು ಪ್ರೇಮ ಹೊಮ್ಮಲೆಂದು
ಗಿಡವ ನಾ ನೆತ್ತಿರುವೆ

ಈ ದಿನದಲ್ಲಿ ಅದೇನು ಪರಿಮಳ
ಕಾಣಲಾಗದ ಹೊಸ ಹುರುಪು
ಅರಳು ಮಲ್ಲಿಗೆ ದುಂಡು ಮಲ್ಲಿಗೆ
ಎಲ್ಲದರೋಲೊಂದು ಹೊಸ ನುಣುಪು

ಹೊಸತು ವರುಷವು ಅಲ್ಲ
ಹಳತು ರುತುವದು ಬೆಲ್ಲ
ಹೊಸ ಮೊಗದ ಹೊಸ ನೆರಳುಗಳು

ಮೆಲ್ಲ ಮೆಲ್ಲನೆ ಹಾರಿ
ತನ್ನ ತಣ್ಣನೆ ಸೂಸಿ
ಘಮ್ಮನೆ ಅರಳಿದವು ಹ್ರದಯಗಳು

ಮನೆಯಂಗಳದ ಮುಂದೆಲ್ಲ
ಬೆಳಗಿಹುದು ಮಲ್ಲಿಗೆಯು
ಮಾತೆಲ್ಲ ಇಂದು ಮರೆತಿರುವೇನು

ಇನ್ನು ಅರಳಿರದ ಜಾಜಿ
ಮಲ್ಲಿಗೆಯ ಎಸಳು ಸವರುತ್ತ
ಹ್ರದಯ ಗೀತೆಯನು ಬರೆದಿರುವೆನು !

--------------------------------------------------------
priiti maatanu heeLalende
malligeya naa tAndiruve
anudinavu prema hommaleAndu
giDava naa neTTiruve

ii dinadalli adeenu parimaLa
kaaNalaagada hosa hurupu
araLu mallige dunDu mallige
elladarolondu hosa nuNupu

hosatu varushavu alla
haLatu Rutuvadu bella
hosa mogada hosa neraLugaLu

mella mellane haari
taNNa taNNane susi
ghammane araLidavu hRdayagaLu

maneyaAngaLada muAndella
beLagihudu malligeyu
maatella indu maretiruvenu

innu araLirada jaaji
malligeya esaLu savarutta
hRdaya giiteyanu barediruvenu !

ಸಾರಿ ರೀ

ಸಾರೀ
ರೀ
ಎಂದು ಪೀಡಿಸುತ್ತಿದ್ದವಳು
ಅದು ದಕ್ಕಿದ
ಮೇಲೆ
ಈಗ ಪರಿತಪಿಸುತ್ತಿದ್ದಾಳೆ
ಬಣ್ಣ ಹೋದ ಸಾರಿಯ
ನೋಡಿ
"ಸಾರೀ ರೀ"
--------------------------------------
---------------------
saarii
rii
endu piidisuttiddavalu
adu dakkida
mele
iiga paritapisuttiddaaLe
baNNa hoda saariya
nooDi
"sorry rii"

Wednesday, November 19, 2008

ಉದಯಾಸ್ತಮಾನ

ಮುಂಜಾನೆ ಮತ್ತು
ಮುಸ್ಸಂಜೆಗಳ
ಆನಂದವನ್ನು
ನಾನಿನ್ನ
ಕದಪುಗಳಲ್ಲಿ
ಸವಿಯುತ್ತಿದ್ದೇನೆ !

~~~~~~~~~~~~~~~~~~~~~~~~~~~~~~~~~~~~~~~~~~
munjaane mattu
mussanjegaLa
aanandavannu
naaninna
kadapugaLalli
saviyuttiddene !

ಸಿಹಿ ಕಹಿ

ಬಾಕಿಯೆಲ್ಲವೂ
ಕಹಿ
ಅರಿತ ಮೇಲೆ
(ನಿನ್ನ) ಕೆಂದುಟಿಯ
ಸಿಹಿ !!
~~~~~~~~~~~~~~~~~~~~~~~~~~~~~~~~~~~~~~~~~~~
baakiyellavu
kahi
arita mele
(ninna) kendiTiya
sihi !!

ಪುಸ್ತಕ

ಹುಡುಗಿ
ಪುಸ್ತಕಗಳ
ಹೆಚ್ಚು ಎದೆಗೆ
ಒತ್ತದಿರು !
ನನಗಿಲ್ಲಿ
ಉಸಿರುಗಟ್ಟುತ್ತಿದೆ !!
~~~~~~~~~~~~~~~~~~~~~~~~~~~~~~~~~~~~~~~~~~~~
huDugi
aa pustakagaLa
hecchu edege
ottadiru !
nanagilli
usirugaTTuttide !!

Saturday, November 1, 2008

ನಳ ಪಾಕ

"ರೀ" ನಲ್ಲೆಯ ದನಿ ಕೇಳಿ ಓಗೊಟ್ಟೆ ನಾ
ನನಗಿಂದು ರಜೆಯ ದಿವಸ, ಅಡಿಗೆಯೆಲ್ಲವು ನಿಮ್ಮದೇ !
ವಾರವೆಲ್ಲ ಕುಣಿದು, ಮಣಿದು ದಣಿದಿಹೆನು
ನಾರಿಗೂ ಬೇಕು ವಿಶ್ರಾಂತಿ, ಸ್ವಾತಂತ್ರ್ಯ
ಪಾತ್ರೆ ಪಗಡೆ ತಮ್ಮದೇ !!

ಇದೇನೇ ಹೊಸ ರಾಗ ನಿನ್ನದು, ಗತಿಯೇನು ನನ್ನದು
ನಾನಿನ್ನ ಮಾಡಿಲ್ಲ ಶೋಷಣೆ, ಕೇಳು ಚಿನ್ನ ನಿನ್ನಾಣೆ !
ಉಪವಾಸ ಕೆಡವದಿರು, ಈ ಅಬಲಗೆ ದಯೆ ತೋರು
ಇಂದಿವಳ ಬುದ್ಧಿಗೇನು ಬಡಿಯಿತೋ ನಾ ಕಾಣೆ !!

ಅತಿ ಬುದ್ಧಿಯ ತೋರದಿರಿ, ಚಿನ್ನ ರನ್ನಕೆ ನಾ ಬಗ್ಗೆನಿನ್ನು!
ನೀವ್ ಗಂಡಸರು ಹೇಳಿದ್ದು ನಡೆಯದು, ನಾವೀಗ ಸಬಲೆಯರು!
ನನಗಂತೂ ಉಪವಾಸ, ಬೇಕಾದ್ದು ಮಾಡಿ, ಇಲ್ಲ ತೆರಳಿ ಹೋಟೆಲು
ಮತ್ತೆ ನನ್ನ ಸೆರಗೆಳೆದು ಓಲೈಸದಿರಿ, ಹುಷಾರು !!

ನಾರಿ ಮುನಿದರೆ ಮಾರಿ - ಸೌಟು ಕೈಯೊಳು ಪಿಡಿದೆನು
ಪಾತ್ರೆ ಪಗಡೆಗಳೆಲ್ಲ ಧಡ ಭಢ; ಕುಪ್ಪಿ ಗ್ಲಾಸುಗಳೆರಡು ಪುಡಿ ಪುಡಿ
ಬೇಳೆ ಕಾಳುಗಳುರುಳಿದವು ನೆಲದಲಿ; ಒಳ ಹೊರಗೆಲ್ಲ ಸಾರು ನೀರು !
ಬೆರಳು ಸುಟ್ಟಿತು, ಸೊಂಟ ಉಳುಕಿತು; ಮನೆ ಮನದೊಳಗೆ ಗಡಿಬಿಡಿ !
strong>
ಮಡದಿ ಬಂದಳು ಕಣ್ಣೀರು ಸುರಿದಳುನೀವ್ ಇದೇನ್ ಮಾಡಿಕೊಂಡಿರಿ
ಕ್ಷಮಿರೆನ್ನನು; ಮದ್ದು ಹಚ್ಚುವೆ; ಕೂತಿರಿ ಬದಿಯಲಿ ತೆಪ್ಪಗೆ !
strong>ಮಹಿಳಾ ಸಮಾನತೆ ಪರರಿಗಿರಲಿ, ನನಗೆ ನೀವ್ ಚೆನ್ನಿದ್ದರೆ ಸಾಕು
ನಿಮ್ಮ ನಗುವೇ ಎನಗೆ ಸುಖವು; ಅತಿ ಸಂತಸ ನಿಮ್ಮ ಒಲವೆನಗೆ !!

ಕಾಲ್ಗೆಜ್ಜೆ ಕುಣಿಯಿತು, ಬಳೆ ಝೆಂಕರಿಸಿತು, ಸೊಂಟ ಕುಲುಕಿತು ಕುಲುಕುಲು
ಒಳ ಹೊರಗೆಲ್ಲ ಘಮ ಘಮ ಪರಿಮಳ; ಕ್ಷಣ ಮಾತ್ರದಲಿ ತಯಾರು ಮೃಷ್ಟಾನ್ನ !
ಕಣ್ಣಿವೆಯಿಕ್ಕದೆ ನೋಡುತಲಿದ್ದೆ, ಮುಗುಳ್ನಕ್ಕು ಹೊಡೆದಳು ಕಣ್ಣು
ಕೈಪಿಡಿದು ಊಟಕೆ ಕರೆದಳು; ಪತ್ನಿ ನಗುತಲಿದ್ದರೆ ಏನು ಚೆನ್ನ !!
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
"rii" nalleya dani keLi oogoTTe naa
nanagindu rajeya divasa, aDigeyellavu nimmade !
vaaravella kuNidu, maNidu daNidihenu
naarigu beku vishranti, swatantrya
patre pagaDe tammade !!

idene hosa raga ninnadu, gatiyenu nannadu
naaninna maadilla shoshaNe, keLu chinna ninnaaNe !
upavaasa keDavadiru, ii abalage daye toru
indivaLa buddhigenu badiyitoo naa kaaNe !!

ati buddhiya toradiri, chinna rannake naa baggeninnu!
neev ganDasaru heliddu naDeyadu, naaviiga sabaleyaru!
nanagantu upavaasa, bekaaddu maaDi, illa teraLi hooTelu
matte nanna serageledu oolaisadiri, hushaaru !!

naari munidare maari - sauTu kaiyoLu piDidenu
paatre pagaDegaLella dhaDa bhaDa; kuppu glaasugaLeradu puDi puDi
beLe kaaLugaluruLidavu neladali;oLa horagella saaru niiru !
beraLu suTTitu, sonTa uLukitu; mane manadoLage gaDibiDi !

maDadi bandaLu kaNNiiru suridaLuniiv iden maadikonDiri
kshamirennanu; maddu hacchuve; kootiri badiyali teppage !
mahiLaa samaanate pararigirali, nanage neev chenniddare saaku
nimma naguve enage sukhavu; ati santasa nimma olavenage !!

kaalgejje kuNiyitu, baLe jhenkarisitu, sonTa kulukitu kulukulu
oLa horagella ghama ghama parimaLa; kshaNa maatradali tayaaru mrishtanna !
kaNNiveyikkade noDutalidde, muguLnakku hoDedalu kaNNu
kaipiDidu uuTake karedaLu; patni nagutaliddare enu chenna !!

Thursday, October 30, 2008

ತೀಕ್ಷ್ಣತೆ

ನಿನ್ನ ಕಣ್ ನೋಟಕೆ

ಶಿಲೆಯೂ ಕರಗಬಹುದು

ಅಂತಿರುವಾಗ....

ನನ್ನ ಬಡ ಹೃದಯ

ಯಾವ ಲೆಕ್ಕಕ್ಕೆ ???????
~~~~~~~~~~~~~~~~~~~~~~~~~~~~~~~~~
ninna kaN nooTake
shileyu karagabahudu
antiruvaaga....
nanna baDa hridaya
yaava lekkakke ???????

Wednesday, October 29, 2008

ಸ್ವಾರ್ಥ

ಮುಂಜಾವಿನಲಿ ಅರಳುವ
ಸುಮವ ಕಣ್ ತುಂಬಿಸುವ
ಇಚ್ಛೆ ನನಗಿಲ್ಲ !
ಅದರ ಸುಗಂಧ
ಮಾತ್ರ ನನಗಿರಲಿ !


ಇಬ್ಬನಿಯನು ಚಿಟಿಲ್ಲನೆ
ಒಡೆಯುವ ಬಯಕೆ ನನಗಿಲ್ಲ !
ಅದರ ಥಳಕು
ಹೊಳಪು ನನಗಿರಲಿ !


ಭತ್ತದ ತೆನೆಗಳಲಿ
ತೊನೆಯುವಾಸೆ ಎನಗಿಲ್ಲ !
ಕೆನೆಹಾಲು ಮಾತ್ರ
ನನಗಿರಲಿ !


ನಿನ್ನ ಬಿಂಬ ನನ್ನ
ಕಣ್ಮುಂದೆ ಇರದಿರೆ
ಚಿಂತಿಲ್ಲ !
ನಿನ್ನ ಪ್ರೀತಿ
ಮಾತ್ರ ನನಗಿರಿಲಿ !
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
munjaavinali araLuva
sumava kaN tumbisuva
icche nanagilla !
adara sugandha
maatra nanagirali !

ibbaniyanu chitillane
odeyuva bayake nanagilla !
adara thaLaku
hoLapu nanagirali !

bhattada tenegaLali
toneyuvaase enagilla !
kenehaalu maatra
nanagirali !

ninna bimba nanna
kaNmunde iradire
chintilla !
ninna priiti
maatra nanagirili !

Tuesday, October 28, 2008

ಒಂದು ಮುಂಜಾವು

ಸೌಮ್ಯ ರಜನಿಯಲಿ ಅನುಪಮ ಶಿಶಿರವಿದೆ
ಕ್ಷಿತಿ ತಬ್ಬಿಹನು ಕೌಮುದಿಯ

ಆಕಾಶ ಕಳಿಸಿದನು ಪ್ರೇಮ ಬಿಂದುವ
ಲತಾಂಗಿ ಲತೆ ಚುಂಬಿಸಿದಳು

ಸುಮ ತೊನೆದಿಹಳು ಮುರಳಿ ಗಾನಕೆ
ಆಕೆ ಸುಹಾಸಿನಿ !

ಮುಗಿಲಲ್ಲಿ ತುಟಿ ಇರಿಸಿಹಳು ಮಲ್ಲಿಗೆ
ಮಿಣುಕು ನಕ್ಷತ್ರ ಆಕೆಯ ಪತಿ !

ಐಕಿಲೊಳಗಿಂದ ಚಿಮ್ಮುವ ಕಮಿತ್ತು
ಅಮಿತಾನಂದ ಮಾನಸ !

ಉಷಳಿಲ್ಲವಿಲ್ಲಿ ಶೀತಲ ರಶ್ಮಿ ನಲಿದಿಹಳು
ಹರಿಣಿಯ ಇನಿದನಿ ದೂರದ ಬೆಟ್ಟದಿಂದ

ಸಸ್ಯ ಶ್ಯಾಮಲಳ ಅಧರದಿ ಜಿನುಗುತ್ತಿದೆ ಹನಿ
ಅದು ವಿರಹಿಯ ಕಂಬನಿ !

ಮಯೂರ ಇಲ್ಲಿಲ್ಲ ಗೆಜ್ಜೆ ಕಟ್ಟಿ ನರ್ತಿಸಲು
ಗಿರಿಬಾಲೆ ಹೊದೆದಿಹಳು ಕನಸಿನ ಹೊದಿಕೆ !

ಪಿಸು ದನಿ, ನಿಟ್ಟುಸಿರು ಬೆಚ್ಚನೆಯ ಹಿಡಿತದಲಿ
ಕಾವಿಲ್ಲ.... ಬರಿ ಪ್ರೀತಿ !

ದಿವ್ಯ ಜ್ಯೋತಿ ಪ್ರಭೆ ಸುಲೋಚನಳ ಸ್ಪರ್ಶಿಸುತಿಹುದು
ಸುಪ್ರಭಾತಕ್ಕೆ ನಾಂದಿ !!
~~~~~~~~~~~~~~~~~~~~~~~~~~~~~~~~~~~~~~~~~~~~~
saumya rajaniyali anupama shishiravide
kshiti tabbihanu kaumudiya

aakaasha kaLisidanu prema binduva
lataangi late chumbisidaLu

suma tonedihaLu murali gaanake
aake suhaasini !

mugilalli tuTi irisihaLu mallige
minuku nakshatra aakeya pati !

aikiloLaginda chimmuva kamittu
amitaananda maanasa !

ushaLillavilli shiitala rashmi nalidihaLu
hariniya inidani durada bettadinda

sasya shyaamalaLa adharadi jinuguttide hani
adu virahiya kambani !

mayura illilla gejje katti nartisalu
giribaale hodedihalu kanasina hodike !

pisu dani, nittusiru becchaneya hiditadali
kaavilla.... bari priiti !

divya jyoti prabhe sulochanaLa sparshisutihudu
suprabhaatakke naandi !!

Monday, October 27, 2008

ನಿರೀಕ್ಷೆ

ನಿನ್ನ
ಹೃದಯ
ಸುಮದ ಮೊಗ್ಗು
ಎಂದು
ಅರಳಿ
ಪರಿಮಳ
ನೀಡುವುದೋ??
~~~~~~~~~~~~~~~~~~~~~~~~~~~~~~~~~~~~~~~~~~
ninna
hridaya
sumada moggu
endu
araLi
parimala
neeDuvudo??

Sunday, October 26, 2008

ಹೆಣ್ಣಿನಂತರಂಗವ ದೇವನೇ ಬಲ್ಲ

ಎರಡು ದಿವಸಗಳಿಂದ ನೀ
ಬರಲಿಲ್ಲ; ಬೇಸರವಿಲ್ಲ
ಚಿಂತೆ ಇಷ್ಟೇ .. ನಿಜವಾಗಿ
ನೀ ಯಾಕೆ ಬರಲಿಲ್ಲ ?!

ಆ ಎರಡು ದಿವಸಗಳಲ್ಲಿ
ನಿನ್ನನ್ನೇ ನೆನೆಯುತ್ತಿದ್ದೆ
ಎಂದು ನೀ ತಿಳಿದರೆ
ಅದು ನಿನ್ನ ತಪ್ಪು ಗ್ರಹಿಕೆ
ಏಕೆಂದರೆ.....
ನಾನಿನ್ನೂ ಬದುಕಿದ್ದೇನಲ್ಲ !!

ನೀ ತನುವಲಿ ಮುತ್ತು ರತ್ನ ಹವಳ
ಗಳ ಧರಿಸಿ, ಶೃಂಗಾರ ನಾಯಕಿಯಾಗಿ
ಬರಬೇಕೆಂದು ನಾ ಹೇಳುವುದಿಲ್ಲ
ನಿನಗೆ ಮೊದಲೇ ಅರಿವಿದೆ...
ನಾ ಶ್ರೀಮಂತ-ನಲ್ಲ !!

ಉದ್ಯಾನವನದ ಸುಮಗಳೆಡೆಯಲಿ
ನೀ ಮಾತನಾಡುವುದೇ ಇಲ್ಲ !
ನಿನ್ನಧರ ನಾ ಸವರುತಿರುವಾಗ
ಅದಕೆ ಅವಕಾಶವಿರುವುದಿಲ್ಲ !!

ಮದುವೆಯೆಂದು ಪ್ರಶ್ನಿಸಿದರೆ
ನೀ ಉತ್ತರಿಸುವುದಿಲ್ಲ !
ನನ್ನ ಬಾಹುಗಳನ್ನೇ ನಿನ್ನ ಕೊರಳಿಗೆ
ಸುತ್ತಿಸಿ ತಾಳಿ ಮಾಡಿಕೊಂಡೆಯಲ್ಲ !!

ನೀ ಕೆಲವೊಮ್ಮೆ ಪಿಸುನುದಿಯುತ್ತಿ
"ನಾ ನಿಮ್ಮ ಪ್ರೀತಿಸಿಯೇ ಇಲ್ಲ"
ನನಗೆ ದಿಗಿಲೆನ್ನಿಸುವುದು..ನೀ ನಗುವೆ
ಹೆಣ್ಣಿನಂತರಂಗವ ದೇವನೇ ಬಲ್ಲ !!!!!
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
earaDu divasagalinda nii
baralilla; besaravilla
chinte ishTe .. nijavaagi
nii yaake baralilla ?!

aa eraDu divasagaLalli
ninnanne neneyuttedde
endu nii tilidare
adu ninna tappu grahike
ekendare.....
naaninnu badukiddenalla !!

nii tanuvali muttu ratna havaLa
gaLa dharisi, shringaara naayakiyaagi
barabekendu naa heluvudilla
ninage modale arivide...
naa shrimanta-nalla !!

udyaanavanada sumagaledeyali
nii maatanaaduvude illa !
ninnadhara naa savarutiruvaaga
adake avakaashaviruvudilla !!

maduveyendu prashnisidare
nii uttarisuvudilla !
nanna baahugaLanne ninna koraLige
suttisi taaLi maaDikonDeyalla !!

nii kelavomme pisunudiyutti
"naa nimma priitisiye illa"
nanage digilennisuvudu..nii naguve
henninantarangava devane balla !!!!!

Saturday, October 25, 2008

ಮುತ್ತು

ಮಾತು ಮುತ್ತಿನಂತಿರಲಿ
ನನ್ನಾಕೆಗೆ ಸಹಮತವಿಲ್ಲ
ಆಕೆಗೆ
"ಮುತ್ತೇ" ಮಾತಂತೆ !
~~~~~~~~~~~~~~~~~~~~~~~~~~~~~~~~~~~~
maatu muttinantirali
nannakege sahamatavilla
aakege
"muttu" maatante !

Friday, October 24, 2008

ಮಡದಿಯ ಜೊತೆ shopping

ನಡೆದ ಕಥೆ ಹೇಳುವೆ ಕೇಳಿ
ಓ ಎಲ್ಲ ಸತ್ ಗೃಹಸ್ತರೆ
(ಕೇಳಿ ಪುರುಸೊತ್ತಿದ್ದರೆ !)
ನಿಮಗಾದರೂ ಕಷ್ಟ ತಪ್ಪಲಿ
ಹೆಂಡತಿಯೆದುರು ತೀಡಬೇಡಿ ಮೀಸೆ ಇದ್ದರೆ !!

ಅದೊಂದು ದಿನ ಪ್ರೆಮದಿಂ ಲಲ್ಲೆಗೈದಳು
ಮುದ್ದು ಮೊದ್ದಿನ ಮಡದಿ ಅನುಪಮಂ !
ತಬ್ಬಿ ಮೋಹದಿಂ ಕೇಳ್ದಳು
ನಿನ್ನೆಯೇ ದೊರೆಯಿತಲ್ಲವೇ ಸಂಬಳದ ರಖಂ ??

ಧಡಲ್ಲನೇಳ ಹೊರಟೆ, ಬಿಡಲಿಲ್ಲ ಸತಿಮಣಿ
ಎದೆಯೊಳಗದೇನೋ ಪುಕು ಪುಕು, ಡಿಂಗ್ ಡಾಂಗ್ !
ಕೊಡಿಸಿಲ್ಲ ನೀವೆನಗೆ ಸಾರಿ, ಚೂಡಿದಾರ
ನಾ ಪೋಗುವೆ ನಾಳೆಯೇ ಶಾಪಿಂಗ್ !!

ಓ ನನ್ನ ಪ್ರಾಣ ಸಖಿ, ಸುಮ ವದನ ಮುಖಿ
ಕಟ್ಟಲಿನ್ನೂ ಇದೆ ವಿದ್ಯುತ್, ನೀರ ಬಿಲ್ !
ನನ್ನ ಪ್ರೇಮದ ಸೆರಗೇ ನಿನಗೆ ಸಕಲ ವಸನ ಆಭೂಷಣ
ಕೋಪಿಸದಿರು, ದೀಪಾವಳಿ ಬಂದಿಲ್ಲ ಬುಲ್ ಬುಲ್!!

ಬೇಡಿದಳು, ಕಾಡಿದಳು, ಕೈ ಪಿಡಿದು ಬಿನ್ನವಿಸಿದಳು
ಹೂಂ... ಗೋಣಾಡಿಸಿದೆ... ಎಷ್ಟೆಂದರೂ ನನ್ನವಳಲ್ಲವೇ?!
ಸತಿ ಮಾತಿಗೆ ದನಿ ಎತ್ತಿದವರ ಹಣೆಬರಹ
ನಿಮಗೆಲ್ಲರಿಗೂ ಅರಿವಿದೆ ಅಲ್ಲವೇ???!!!

ಬಯಕೆ ತೀರಿದ ಮೊಗವದಾಕೆಯದೇನು ಸೊಗಸು
ಏನು ಚಂದ ಈ ನನ್ನ ಮೈಸೂರ ಮಲ್ಲಿಗೆ!
ಆ ಕಣ್ಣ ನೋಟದೊಳೆಲ್ಲ ಪ್ರೀತಿಯ ಧಾರೆ ಎರೆದಳು
ಬನ್ನಿ ಇಂದೊಮ್ಮೆ ಹೋಗುವ ಹೋಟೆಲಿಗೆ !!


ಚಿನ್ನ, ಪಿಸುಗುಟ್ಟಿದೆ ಕಿವಿ ಕಚ್ಚಿ
ನಿನ್ನ ಕೈ ಅಡುಗೆಯೇ ಚೆನ್ನ !!
ನನ್ನಲಿರುವುದು ಇನ್ನು ಬರಿ ನೂರು !
ಕುಡಿ ನೋಟದಿ ನೋದ್ದಳು, ಕೈ ಚೀಲ ತೆರೆದಿಟ್ಟಳು
ತೆಗೆದುಕೊಳ್ಳಿರಿ ಈ ಮುನ್ನೂರು !

ತಿರುಗಿತ್ತು ತಲೆ ಪೇಟೆಯಲ್ಲೇ, ಕಾದಿದ್ದೆ ಮನೆ ತನಕ
ಮುಗಿದಿತ್ತು ಮುಕ್ಕಾಲು ಸಲರಿ !
ಮೊಗವೊರೆಸಿದಳು, ತಂಗಾಳಿ ತೀಡಿದಳು
ಪೇಲ್ದಳು "ನೀವೆಷ್ಟು ಒಳ್ಳೆಯವರು ರೀ" !!!
~~~~~~~~~~~~~~~~~~~~~~~~~~~~~~~~~~~~~~~~~~~~~~
naDeda kathe heluve keLi
oo ella sat gruhastare
(keLi purusottiddare !)
nimagaadaru kashta tappali
henDatiyeduru teeDabedi miise iddare !!

adondu dina premadim lallegaidaLu
muddu moddina maDadi anupamum !
tabbi mohadim keldaLu
ninneye doreyitallave sambaLada rakham ??

dhaDallaneLa horaTe, bidalilla satimaNi
edeyoLagenoo puku puku, ding dong !
kodisilla neevenage saari, chooDidaara
naa poguve naaLeye shaaping !!

oo nanna praana sakhi, suma vadana mukhi
kaTTalinnu ide vidyut, niira bil !
nanna premada serage ninage sakala vasana aabhooshaNa
kopisadiru, deepaavaLi bandilla bul bul !!

bedidaLu, kaadiDalu, kai pididu binnavisidaLu
hum... goonaadiside... eshtendaru nannavaLallave?!
sati maatige dani ettidavara haNebaraha
nimagellarigu arivide allave???!!!

bayake teerida mogavadaakeyadenu sogasu
enu chanda ii nanna mysura mallige!
aa kaNNa notadoLella priitiya dhaare eredaLu
banni indomme hoguva hooTelige !!

chinna, pisuguTTide kivi kacchi
ninna kai adugeye chenna !!
nannaliruvudu innu bari nuru !
kuDi noTadi noDdaLu, kai chiila terediTTaLu
tegedukoLLiri ii munnuru !

tirugittu tale peteyalle, kaadidde mane tanaka
mugidittu mukkaalu salary !
mogavoresidaLu, tangaaLi teedidaLu
peLdaLu "niiveshtu oLLeyavru rii" !!!

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
This song i wrote almost 10 years back. (My note book says it was 6/6/1998 !!). I don't think that song may match for todays urban culture. So i writtena updated version of the poem that can match existing bangalore culture !! So.........here we go !!!
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ನಡೆದ ಕಥೆ ಹೇಳುವೆ ಕೇಳಿ
ಓ ಎಲ್ಲ ಸಾಫ್ಟ್ವೇರ್ ಹುಡುಗರೇ
(ಕೇಳಿ ಆನ್ ಬೆಂಚ್ ಇದ್ದರೆ !)
ನಿಮಗಾದರೂ ಕಷ್ಟ ತಪ್ಪಲಿ
ಹೆಂಡತಿಯೆದುರು ತೀದಬೇಡಿ ಮೀಸೆ ಇದ್ದರೆ !!

ಅದೊಂದು ದಿನ ಪ್ರೆಮದಿಂ ಸೋಪ್ ಹಾಕಿದಳು
ಮುದ್ದು ಮೊದ್ದಿನ ಮಡದಿ ಶಬನಂ !
ತಬ್ಬಿ ಮೋಹದಿಂ ಕೆಲ್ದಳು
ಕ್ರೆಡಿಟ್ ಆಗಿಲ್ಲ್ವೂ ಸಂಬಳದ ರಖಂ ??

ಧದಲ್ಲನೆಲ ಹೊರಟೆ, ಬಿಡಲಿಲ್ಲ ಸತಿಮಣಿ
ಎದೆಯೋಳಗೆನೂ ಪುಕು ಪುಕು, ಡಿಂಗ್ ದೊಂಗ್ !
ಕೊಡಿಸಿಲ್ಲ ನೀನೆನಗೆ ಮಿನಿ, ಮಿಡಿ, ಘಗ್ರ ಕೂಲಿ
ನಾ ಪೋಗುವೆ ನಾಳೆಯೇ ಶಾಪಿಂಗ್ !!

ಊ ನನ್ನ ಪಾರ್ಟ್ನರ್, ರೂಸೀ
ಕತ್ತಲಿನ್ನು ಇದೆ ಇಂಟರ್ನೆಟ್, ಮೊಬೈಲ್ ಬಿಲ್ !
ನನ್ನ ಲವ್ವೇ ನಿನಗೆ ಸಕಲ ಡೈಮಂಡ್, ಲ್ಯಾಪ್ಟಾಪ್
ಕೊಪಿಸದಿರು, ಅಪ್ಪ್ರಿಸಲ್ ಬಂದಿಲ್ಲ ಬಲ ಬಲ !!

ಚಾನೆಲ್ ಬದಲಿಸಿದಳು, ಕೀ ಬೋರ್ಡ್ ಗುದ್ದಿದಳು
ಹುಂ... ಗೂನಾಡಿಸಿದೆ... ಎಷ್ಟೆಂದರೂ ಕತ್ತಿಕೊಂದವಳಲ್ಲವೇ?!
ಸತಿ ಮಾತಿಗೆ ದನಿ ಎತ್ತಿದವರ ಹಣೆಬರಹ
ನಿಮಗೆಲ್ಲರಿಗೂ ಅರಿವಿದೆ ಅಲ್ಲವೇ???!!!


ಬಯಕೆ ತೀರಿದ ಮೊಗವದಾಕೆಯದೆನು ಸೊಗಸು
ಏನು ಚಂದ ಈ ನನ್ನ ಮಲ್ಲೇಶ್ವರಂ ಮಲ್ಲಿಗೆ!
ಆ ಕಣ್ಣ ನೋತದೊಲೆಲ್ಲ ಪ್ರೀತಿಯ ಧಾರೆ ಎರೆದಳು
ಬಾರೂ ಇನ್ದೊಮ್ಮೆ ಹೋಗುವ ಕೆಫೆ ಕಾಫ್ಫೆ ಡೇ ಗೆ !!

ಡಿಯರ್, ಪಿಸುಗುಟ್ಟಿದೆ ಕೈ ಜಗ್ಗಿ
ಮನೆ ಪಕ್ಕದ ಉಡುಪಿ ಹೊತೆಲೆ ಚೆನ್ನ !!
ನಾ ತಂದಿರುವುದು ಒಂದೇ ಡೆಬಿಟ್ ಕಾರ್ಡ್ !
ಓರೆ ನೋಟದಿ ನೋದ್ದಳು, ಪರ್ಸ್ ತೆರೆದಿತ್ತಲು
ತೆಗೆದುಕೋ ಈ ಕ್ರೆಡಿಟ್ ಕಾರ್ಡ್ !

ತಿರುಗಿತ್ತು ತಲೆ ಫಾರುಮ್ನಲ್ಲೇ, ಕಾದಿದ್ದೆ ಅಪಾರ್ಟ್ಮೆಂಟ್ ತನಕ
ಮುಗಿದಿತ್ತು ಮುಕ್ಕಾಲು ಸಲರಿ !
ಜೂಸ್ ಕುಡಿಸಿದಳು, ಐಸ್ ಕ್ರೀಮ್ ತಿನಿಸಿದಳು
ಒದರಿದಳು "ನೀನೆಷ್ಟು ಕನ್ಜುಎ ಕಣೋ" !!!

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
naDeda kathe heluve keLi
oo ella software huDugare
(keLi on bench iddare !)
nimagaadaru kashta tappali
henDatiyeduru teeDabedi miise iddare !!

adondu dina premadim soap haakidlu
muddu moddina maDadi shabnam !
tabbi mohadim keldaLu
credit aagillvoo sambaLada rakham ??

dhaDallaneLa horaTe, bidalilla satimaNi
edeyoLagenoo puku puku, ding dong !
kodisilla neenenage mini, midi, ghagra chooli
naa poguve naaLeye shaaping !!

oo nanna partner, roosii
kaTTalinnu ide intarnet, mobail bil !
nanna lavve ninage sakala diamond, laptop
kopisadiru, appraisal bandilla bul bul !!

chaanel badalisidaLu, kii boorD guddidaLu
hum... goonaadiside... eshtendaru kaTTikondavaLallave?!
sati maatige dani ettidavara haNebaraha
nimagellarigu arivide allave???!!!

bayake teerida mogavadaakeyadenu sogasu
enu chanda ii nanna malleshwaram mallige!
aa kaNNa notadoLella priitiya dhaare eredaLu
baaroo indomme hoguva cafe coffe day ge !!

dear, pisuguTTide kai jaggi
mane pakkada udupi hotele chenna !!
naa tandiruvudu onde debit card !
oore noTadi noDdaLu, purse terediTTaLu
tegeduko ii credit card !

tirugittu tale forumnalle, kaadidde apartment tanaka
mugidittu mukkaalu salary !
juice kuDisidaLu, ice cream tinisidaLu
odaridaLu "niineshtu kanjue kaNo" !!!

Thursday, October 23, 2008

ಕೋರಿಕೆ

ಹಿಮಗಿರಿಯಂತಿರುವ
ನಿನ್ನ ಹೃದಯದ
ತಪ್ಪಲಲಿ
ನಾ
ಸರೋವರವಾಗಲೇ ????
~~~~~~~~~~~~~~~~~~~~~~~~~~~~~~~~~~~~~~
himagiriyantiruva
ninna hridayada
tappalali
naa
sarovaravaagale ????

Wednesday, October 22, 2008

ಕವನ ಅರಳುವುದೆಲ್ಲಿ ???

ಕವನ ಬರುವಳಿಲ್ಲಿ
ತುಂಬು ಹೃದಯದ
ಅಂದದ ಬಿಂದಿಗೆಯಲ್ಲಿ !

ಕವನ ತೊನೆವಳಿಲ್ಲಿ
ಮುಗ್ಧ ಮಗುವಿನ ಹಾಲುಗಲ್ಲದ
ನಗುವ ಲಾಸ್ಯದ ಹೊನಲಿನಲ್ಲಿ

ಕವನ ನಗುವಳಿಲ್ಲಿ
ಭಾವನೆಯಲೆಗಳು ಹೊರ ಚಿಮ್ಮಿ
ಮನದ ಬೇಗೆಗೆ ತಂಪನೆರೆವಲ್ಲಿ

ಕವನ ಅರಳುವಳಿಲ್ಲಿ
ಪ್ರೇಮದ ಕನಸು ಸತ್ತಾಗ
ಬರಿ ಭ್ರಮೆಗಳು ಮುತ್ತಿಕೊಂಡಾಗ
ವಿಷಾದ ಛಾಯೆ ಕಾಣಿಸುವಲ್ಲಿ !
~~~~~~~~~~~~~~~~~~~~~~~~~~~~~~~~~~~~~~~~~~~~
kavana baruvaLilli
tumbu hridayada
andada bindigeyalli !

kavana tonevaLilli
mugdha maguvina haalugallada
naguva laasyada honalinalli

kavana naguvaLilli
bhaavaneyalegaLu hora chimmi
manada begege tampanerevalli

kavana araLuvaLilli
premada kanasu sattaaga
bari bramegalu muttikondaaga
vishaada chhaaye kaanisuvalli !

ಹೆಜ್ಜೆ ಗುರುತು

ನಾ ನಡೆವ ಹಾದಿಯಲಿ
ಸುಮವರಳದಿರಬಹುದು
ಮುತ್ತು ಸುರಿಯದಿರಬಹುದು
ಮಿಂಚಿನ ಬೆಳಕು
ಚಿಮ್ಮದಿರಬಹುದು !
ನನ್ನದೇ ಹೆಜ್ಜೆಗುರುತುಗಳು
ಮೂದುವುದನ್ತು ಸತ್ಯ !!
~~~~~~~~~~~~~~~~~~~~~~~~~~~~~~~~~~~~~~~~~~~~
naa naDeva haadiyali
sumavaraLadirabahudu
muttu suriyadirabahudu
minchina belaku
chimmadirabahudu !
nannade hejjegurutugaLu
muuduvudantu satya !!

Tuesday, October 21, 2008

ಹವಾಮಾನ ವರದಿ

ಗಂಡ ಹೆಂಡಿರ
ಜಗಳ ನೋಡಿದ
ಹವಾಮಾನ ತಜ್ಞ ಹೇಳಿದ
"ಸಾಧಾರಣದಿಂದ
ಭಾರಿ ಮಳೆ"
~~~~~~~~~~~~~~~~~~~~~~~~~~~~~~~~~~~~~~~~~~~~
ganDa henDira
jagaLa nooDida
havaamaana tajna helida
"saadharanadinda
bhaari maLe"

Monday, October 20, 2008

ಗುಲಾಮ

ನಿನ್ನೆಯವರೆಗೆ ಸ್ವಾತಂತ್ರನಿದ್ದೆ
ನೀ ಬಂಧಿಸಿದೆಯೇನ್ನ
ನಿನ್ನೆಯವರೆಗೆ ನನ್ನ್ದೆಯೇ ರಾಜ ನಾನಾಗಿದ್ದೆ
ನೀ ಗುಲಾಮನ ಮಾಡಿದೆಯೇನ್ನ !

ಒಣ ಸುಮಗಳ ಎನಿಸಿ ಗನಿಸಿದೆ
ನಾನೆಂಬ ಅನಾಮಿಕ ಹಾಡಿ ತುಂಬ !
ಇನ್ದರಲಿವೆ ಪಕಲೆಗಳೆಲ್ಲ ನಿನ್ನಂತೆ
ನಿನ್ನ ನಗೆ ಜ್ಯೋತ್ಸ್ನಾ ಬಿಂಬದಂತೆ !


ಇಲ್ಲವೆನಗೆ ವಿಶ್ವಸವಿನ್ನು ..ಕನಸೋ ನನಸೂ?
ಮೈ ಪರಚುವೆ ನಾ
ನಗುವೇ ನಾ ಗೆಲುವಿನಲ್ಲಿ !


ನೀ ನನ್ನ ಮಾನವ ಹಿಡಿಡಿ, ಬಿಡಿ
ನೀನಿಂದೆನ್ನ ಮುದ್ದಿನ ಮಡದಿ !!
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ninneyavarege swatantranidde
nii bandhisideyenna
ninneyavarege nanndeye raaja naanaagidde
nii gulaamana maadideyenna !

oNa sumagaLa eNisi gaNiside
naanemba anaamika haadi tumba !
indaraLive pakaLegaLella ninnante
ninna nage jyotsna bimbadante !

illavenage vishwasavinnu ..kanaso nanasoo?
mai parachuve naa
naguve naa geluvinali !

nii nanna manava hiDidi, baDidi
niinindenna muddina maDadi !!